ಮಹಾರಾಷ್ಟ್ರ, ಗುಜರಾತಿನಲ್ಲಿ ಬಾಂಬ್ ಸ್ಫೋಟ
ಮುಂಬೈ/ ಅಹಮದಾಬಾದ್, ಸೆ. 30 : ಮಹಾರಾಷ್ಟ್ರದ ಮಾಲೆಗಾಂವ್ ಹಾಗೂ ಗುಜರಾತಿನ ಮೊಡಸ್ಸಾ ನಗರಗಳಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ ಆರು ಮಂದಿ ಅಸುನೀಗಿದ್ದು, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದರೊಂದಿಗೆ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ.
ಕೋಮು ಸೂಕ್ಷ್ಮ ಪಟ್ಟಣವಾದ ಮಾಲೆಗಾಂವ್ ನ ಭಿಕು ಚೌಕ್ ನಲ್ಲಿರುವ ಹೊಟೇಲ್ ಒಂದರ ಬಳಿ ಸ್ಕೂಟರ್ ನಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಿಸಿದ್ದರಿಂದ ಕನಿಷ್ಠ 4 ಮಂದಿ ಸತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ನಂತರ ಉದ್ರಿಕ್ತರಾದ ಜನರು ಕಲ್ಲು ತೂರಾಟ ಮತ್ತುಪ ಹಿಂಸಾಚಾರದಲ್ಲಿ ತೊಡಗಿದರು. ಪೊಲೀಸ್ ಠಾಣೆಗೂ ನುಗ್ಗಿ ದಾಂಧಲೆ ಮುಂದಾದರು. ಉದ್ರಿಕ್ತರನ್ನು ಚೆದುರಿಸಲು ಪೊಲೀಸರು ಗುಂಡು ಹಾರಿಸಿದರು.
ಮೊಡಸ್ಸಾದಲ್ಲಿ ಸ್ಫೋಟ
ಇತ್ತೀಚೆಗೆ ಸರಣಿ ಸ್ಫೋಟದಿಂದ ತತ್ತರಿಸಿದ್ದ ಗುಜರಾತ ಜನತೆ ಸಭರಕಾಂತ್ ಜಿಲ್ಲೆಯ ಮೊಡಸ್ಸಾ ಪಟ್ಟಣದಲ್ಲಿ ಸಂಭವಿಸಿದ ಸ್ಫೋಟ ನಲುಗಿ ಹೋಗಿದ್ದಾರೆ. ಮೊಡಸ್ಸಾದಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಬಲಿಯಾಗಿದ್ದು, 14 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಬಾಂಬ್ ಸ್ಫೋಟಕ್ಕೆ ಟೈಮರ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಅಹಮದಾಬಾದ್ ನಲ್ಲಿ 17 ನಾಡ ಬಾಂಬ್ ವಶ
ದೆಹಲಿ ಸ್ಫೋಟ, ಇಬ್ಬರು ಶಂಕಿತರ ಬಂಧನ












Click it and Unblock the Notifications