ಕಾಂಡೋಮ್ ಪ್ಯಾಕಲ್ಲಿ ಕಾಮೋದ್ರೇಕ ಚಿತ್ರಕ್ಕೆ ಓಕೆ
ನವದೆಹಲಿ, ಸೆ.24: ಕಾಂಡೋಮ್ ಪ್ಯಾಕ್ ಗಳ ಮೇಲೆ ಕಾಮೋದ್ರೇಕ ಚಿತ್ರಗಳನ್ನು ಪ್ರಕಟಿಸುವುದರಲ್ಲಿ ತಪ್ಪೇನಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕಾಂಡೋಮ್ ಪ್ಯಾಕ್ ಗಳ ಮೇಲೆ ಹಾಗೂ ಜಾಹೀರಾತುಗಳಲ್ಲಿ ಕಾಮೋದ್ರೇಕ ಚಿತ್ರಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕಾಮೋದ್ರೇಕ ಚಿತ್ರಗಳುಳ್ಳ ಎಲ್ಲ ಕಾಂಡೋಮ್ ಗಳನ್ನು ನಿಷೇಧಿಸುವಂತೆ ತೀರ್ಪು ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ.
ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಕೆ.ಜಿ.ಬಾಲಕೃಷ್ಣನ್ ಅವರು ಕೇಂದ್ರ ಹಾಗೂ ತಮಿಳುನಾಡು ಸರ್ಕಾರ ಸೇರಿದಂತೆ ಭಾರತೀಯ ಜಾಹೀರಾತು ಗುಣಮಟ್ಟ ಸಮಿತಿ, ಕೇಂದ್ರ ಸೆನ್ಸಾರ್ ಮಂಡಳಿ, ಕಾಂಡೋಮ್ ತಯಾರಕ ಕಂಪನಿಗಳಾದ ಟಿಟಿಕೆ-ಎಲ್ ಐಜಿ, ಹಿಂದೂಸ್ತಾನ್ ಲೇಟೆಕ್ಸ್, ಪಶುಪತಿ ಸಿಯೋಹಂಗ್, ಜೆಕೆ ಅನ್ಸೆಲ್ ಮತ್ತು ಅರ್ಜಿದಾರ ಸಿ.ರವಿಕುಮಾರ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ವಿದೇಶಿ ಕಾಂಡೋಮ್ ತಯಾರಿಕಾ ಕಂಪನಿಗಳು ಕಾಮೋದ್ರೇಕ ಚಿತ್ರಗಳನ್ನು ಮುದ್ರಿಸುತ್ತಿವೆ. ಅವುಗಳಿಗೇಕೆ ನಿಷೇಧ ಹೇರಿಲ್ಲ ಎಂದು ದೇಶೀಯ ಕಾಂಡೋಮ್ ಕಂಪನಿಗಳು ಪ್ರಶ್ನಿಸಿದ್ದವು.
(ಏಜೆನ್ಸೀಸ್)
ಕಾಂಡೊಂ ಟೆಸ್ಟರ್ ಹುದ್ದೆಗೆ ಪುರುಷರು ಬೇಕಾಗಿದ್ದಾರೆ
ಮೋಟು ಗೋಡೆಯಲ್ಲ ಇದು ಏಡ್ಸ್ ತಡೆಗೆ ಅಡ್ಡಗೋಡೆ!












Click it and Unblock the Notifications