ಬಾರಿನಲ್ಲಿ ಇನ್ನು ಮುಂದೆ ಮಹಿಳೆಯರದ್ದೇ ಕಾರುಬಾರು

ಬೆಂಗಳೂರು, ಸೆ. 24 : ಬಾರ್, ಪಬ್, ಲೈವ್ ಬ್ಯಾಂಡ್ ಗಳಲ್ಲಿ ಮದ್ಯವನ್ನು ಸರ್ವ್ ಮಾಡಲು ಮಹಿಳೆಯರಿಗೆ ಅನುಮತಿ ನೀಡಬೇಕೆಂದು ಆದೇಶಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಸಿಗಬೇಕೆಂಬ ಬೇಡಿಕೆಯನ್ನು ಎತ್ತಿಹಿಡಿದಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ 20(2)ರ ಅಡಿಯಲ್ಲಿ ಬಾರ್ ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡದಂತೆ ನಿಷೇಧ ಹೇರಿರುವುದು ಸಂವಿಧಾನ ಬಾಹಿರ ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಯಾವ ಷರತ್ತುಗಳಿಲ್ಲದೇ ಬಾರ್ ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡಬೇಕೆಂದು ತೀರ್ಪಿತ್ತಿದ್ದಾರೆ.

ಅಬಕಾರಿ ಕಾಯ್ದೆಯ ನಿಯಮ 20(2)ರ ಅಡಿಯಲ್ಲಿ ಮಹಿಳೆಯರು ಬಾರ್ ನಲ್ಲಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ನಿರಾಕರಿಸಿತ್ತು. ಇದರನ್ನು ವಿರೋಧಿಸಿ ಕರ್ನಾಟಕ ಲೈವ್ ಬ್ಯಾಂಡ್ ಅಸೋಸಿಯೇಶನ್ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿತ್ತು. ಮಹಿಳೆಯರ ಹಿತ ಕಾಪಾಡುವುದು ಸರ್ಕಾರದ ಏಕೈಕ ಉದ್ದೇಶವಾಗಿದೆ. ಆದ್ದರಿಂದ ಬಾರ್ ಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಸೂಕ್ತವಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಆದರೆ, ಸರ್ಕಾರದ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

(ದಟ್ಸ್ ಕನ್ನಡ ವಾರ್ತೆ)

ಪಬ್‌ಗಳ ಮೇಲೆ ಖಾಕಿ ದೌರ್ಜನ್ಯ: ಕಾರ್ನಾಡ್ ಖಂಡನೆ
ತಿಂಗಳಲ್ಲಿ ಲೈವ್‌ಬ್ಯಾಂಡ್ ಸಮಸ್ಯೆ ಪರಿಹರಿಸಿ: ಕೋರ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+