ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ಗವಾಗಲಿದೆ ಬಿಎಸ್ಎನ್ಎಲ್ ರೋಮಿಂಗ್

By Staff
|
Google Oneindia Kannada News

ನವದೆಹಲಿ, ಸೆ.15: ಬಿಎಸ್ಎನ್ಎಲ್ ರೋಮಿಂಗ್ ಶುಲ್ಕಗಳು ಮತ್ತಷ್ಟು ಅಗ್ಗವಾಗಲಿವೆ.ಖಾಸಗಿ ದೂರಸಂಪರ್ಕ ಕಂಪನಿಗಳೊಂದಿಗೆ ಬಿಎಸ್ಎನ್ಎಲ್ ರೋಮಿಂಗ್ ಒಪ್ಪಂದ ಮಾಡಿಕೊಳ್ಳುತ್ತಿದ್ದು ರೋಮಿಂಗ್ ಶುಲ್ಕ ಪ್ರತಿ ನಿಮಿಷಕ್ಕೆ 52 ಪೈಸೆಯಷ್ಟು ಇಳಿಮುಖವಾಗಲಿದೆ.

ಈ ಕುರಿತ ಪ್ರಸ್ತಾವನೆಗೆ ಬಿಎಸ್ ಎನ್ ಎಲ್ ಆಡಳಿತ ಮಂಡಳಿ ಇತ್ತೀಚೆಗೆ ಅನುಮೋದನೆ ನೀಡಿದೆ. ನೂತನ ದೂರಸಂಪರ್ಕ ಸಂಸ್ಥೆ ಸ್ವಾನ್ ಟೆಲಿಕಾಮ್ ಜೊತೆ ಬಿಎಸ್ಎನ್ಎಲ್ ಮೊದಲ ಒಪ್ಪಂದ ಮಾಡಿಕೊಳ್ಳಲಿದೆ.

ಹೊರಹೋಗುವ ಕರೆಗೆ ಪ್ರತಿ ನಿಮಿಷಕ್ಕೆ 52 ಪೈಸೆ ರೋಮಿಂಗ್ ಶುಲ್ಕ ವಿಧಿಸಲು ಬಿಎಸ್ ಎನ್ ಎಲ್ ನಿರ್ಧರಿಸಿದೆ. ಪ್ರಸ್ತುತ ಸರ್ಕಾರಿ ಸ್ವಾಮ್ಯದ ಎಂಟಿಎನ್ಎಲ್ ಚಂದಾದಾರರಿಗೆ ಬಿಎಸ್ಎನ್ಎಲ್ ನೆಟ್ ವರ್ಕ್ ಜೊತೆ ರೋಮಿಂಗ್ ಅವಕಾಶವಿದೆ. ಖಾಸಗಿ ದೂರಸಂಪರ್ಕ ಕಂಪನಿಗಳೊಂದಿಗೆ ಬಿಎಸ್ಎನ್ಎಲ್ ರೋಮಿಂಗ್ ಒಪ್ಪಂದ ಮಾಡಿಕೊಳ್ಳಲಿದ್ದು, ವಾರ್ಷಿಕ 1,000 ಕೋಟಿ ರು.ಗಳ ಆದಾಯ ನಿರೀಕ್ಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X