ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮವಾಗಿ ಬೆಳೆಯಲಾಗಿದ್ದ 40 ಕೆಜಿ ಗಾಂಜಾ ವಶ

By Staff
|
Google Oneindia Kannada News

ಚನ್ನಪಟ್ಟಣ, ಸೆ. 13 : ರಾಮನಗರ ತಾಲೂಕಿನ ಚನ್ನಪಟ್ಟಣ ತಾಲೂಕಿನ ಹನಿಯೂರು ಗ್ರಾಮದಲ್ಲಿ ಅಕ್ರಮವಾಗಿ ಬೆಳೆಸಲಾಗಿದ್ದ 30 ಸಾವಿರ ರುಪಾಯಿ ಬೆಲೆಬಾಳುವ 40 ಕೆಜಿ ಗಾಂಜಾ ಗಿಡಗಳನ್ನು ಪೊಲೀಸರು ಶನಿವಾರ ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮನೆಯ ಮಾಲಿಕ ರಾಜಪ್ಪ ಗೌಡ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರು ನೀಡಿದ ಸುಳಿವಿನ ಮೇರೆಗೆ ಜಾಲವನ್ನು ಬೀಸಿದ ಪೊಲೀಸರು ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದಾರೆ.

ರಾಜಪ್ಪ ಗೌಡ ಅನೇಕ ವರ್ಷಗಳಿಂದ ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದನೆಂದು ಹೇಳಲಾಗಿದೆ. ರಸ್ತೆ ಬದಿಯೇ ಇದ್ದ ಮನೆಯ ಹಿಂಬದಿಯಲ್ಲಿ ಆತನ ವ್ಯವಸಾಯ ಅವ್ಯಾಹತವಾಗಿ ಸಾಗಿತ್ತು. ಸಾರ್ವಜನಿಕರು ಗಮನಕ್ಕೆ ತಂದ ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಮೊದಲು ರಾಜಪ್ಪನ ಪತ್ನಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

ಪೊಲೀಸರು ದಾಳಿ ಮಾಡಿದಾಗ ರಾಜಪ್ಪ ಮತ್ತಿತರರು ಪರಾರಿಯಾಗಿದ್ದಾರೆ. ಪತ್ನಿಯನ್ನು ಮಾತ್ರ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ನಂತರ ರಾಜಪ್ಪನನ್ನೂ ಪೊಲೀಸರು ಬಂಧಿಸಿದ್ದು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X