ಸುಣ್ಣ ಬಣ್ಣಕ್ಕಾಗಿ ಸಚಿವರ ನಿವಾಸಕ್ಕೆ ರು.7.13 ಕೋಟಿ

ಬೆಂಗಳೂರು, ಸೆ.13: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ 20 ತಿಂಗಳ ಅಧಿಕಾರವಧಿಯಲ್ಲಿ ಸಚಿವರ ನಿವಾಸಗಳ ನವೀಕರಣಕ್ಕಾಗಿ ಒಟ್ಟು 7.13 ಕೋಟಿ ರು.ಗಳನ್ನು ವೆಚ್ಚ ಮಾಡಿರುವ ಅಂಶ ಬಹಿರಂಗಗೊಂಡಿದೆ.

ಮೂಡಲಗಿರಿಯ ಸಮಾಜ ಸೇವಕ ಭೀಮಪ್ಪ ಗುಂಡಪ್ಪ ಗಡಾದ ಅವರು ಮಾಹಿತಿ ಹಕ್ಕು ಕಾಯ್ಕೆ ಪ್ರಕಾರ ಸಲ್ಲಿಸಿದ್ದ ಅರ್ಜಿಗೆ ಲೋಕೋಪಯೋಗಿ ಇಲಾಖೆ ಕೊಟ್ಟಿರುವ ಮಾಹಿತಿಯಿಂದ ಈ ವಿಚಾರ ಬೆಳಕುಕಂಡಿದೆ. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮನೆಯನ್ನು ನವೀಕರಣಗೊಳಿಸಲು ಹಾಗೂ ಪೀಠೋಪಕರಣಗಳನ್ನು ಖರೀದಿಸಲು 69.59 ಲಕ್ಷ ರು.ಗಳನ್ನು ಖರ್ಚು ಮಾಡಿದ್ದಾರೆ. ಸಚಿವರಾಗಿದ್ದ ಜಮೀರ್ ಅಹಮದ್ ಖಾನ್ 30,800 ರು. ಖರ್ಚು ಮಾಡಿದ್ದಾರೆ.

ಹಾಗೆಯೇ ಮಾಜಿ ಸಚಿವ ಎಚ್.ಡಿ. ರೇವಣ್ಣ ರು.59 ಲಕ್ಷಗಳನ್ನು ಬಳಸಿದ್ದು, ಆಗ ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 33 ಲಕ್ಷ ರು.ಗಳನ್ನು ಖರ್ಚು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಟ್ಟು ಸಚಿವರು ತಮ್ಮ ಮನೆಗಳಿಗೆ ಸುಣ್ಣ-ಬಣ್ಣಕ್ಕಾಗಿ 1.98 ಕೋಟಿ ರು.ಗಳು, ಪೀಠೋಪಕರಣ ಖರೀದಿಗೆ 4.85 ಲಕ್ಷ ರು.ಗಳನ್ನು ಮತ್ತು ವಿದ್ಯುತ್ ಕಾಮಗಾರಿಗಾಗಿ 30.33 ಲಕ್ಷ ರು.ಗಳನ್ನು ಖರ್ಚು ಮಾಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+