ರಾಷ್ಟ್ರಪತಿ ವೇತನ ರು.1.50 ಲಕ್ಷಗಳಿಗೆ ಏರಿಕೆ
ನವದೆಹಲಿ, ಸೆ.11: ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವೇತನ ಪಡೆಯುವ ನೌಕರರ ಸಂಖ್ಯೆಗೇನು ಬರವಿಲ್ಲ.ಆದರೆ ಸರಕಾರಿ ನೌಕರಿಗಳಲ್ಲಿ ಅತ್ಯಧಿಕ ಸಂಬಳ ದೇಶದ ಪ್ರಥಮ ಪ್ರಜೆಗೆ ಮಾತ್ರ ದಕ್ಕುತ್ತದೆ. ರಾಷ್ಟ್ರಪತಿಗಳ ತಿಂಗಳ ವರಮಾನ ಎಷ್ಟು ಎಂಬ ಬಗ್ಗೆ ಪ್ರಜೆಗಳಲ್ಲಿ ಸಹಜವಾಗಿ ಕುತೂಹಲ ಇದ್ದೇ ಇರುತ್ತದೆ.
ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಮಾಸಿಕ ಭತ್ಯೆಯನ್ನು ಏರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಾಗಾಗಿ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ವೇತನವನ್ನು ಕ್ರಮವಾಗಿ ರು.1.50 ಲಕ್ಷ ಹಾಗೂ ರು.1.25 ಲಕ್ಷಗಳಿಗೆ ಏರಿಸಲಾಗಿದೆ. ಈ ಸಂಬಂಧ ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿತು. .
ಇದೇ ವೇಳೆಯಲ್ಲಿ ರಾಜ್ಯಪಾಲರ ವೇತನವನ್ನೂ ಹೆಚ್ಚಿಸಲಾಗಿದ್ದು ಮಾಸಿಕ ರು.1.10 ಲಕ್ಷಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರದಅಧಿಕೃತ ಪ್ರಕಟಣೆ ತಿಳಿಸಿದೆ.
(ಏಜೆನ್ಸೀಸ್)












Click it and Unblock the Notifications