ಆಟೋರಿಕ್ಷಾಗಳಿಗೆ ಬದಲು ನ್ಯಾನೋ ಕಾರುಗಳು!

ಬೆಂಗಳೂರು, ಸೆ. 11 : ನ್ಯಾನೋ ಕಾರುಗಳು ಮಾರುಕಟ್ಟೆಗೆ ಬಂದರೆ ಅವುಗಳನ್ನು ಆಟೋರಿಕ್ಷಾಗಳಿಗೆ ಪರ್ಯಾಯವಾಗಿ ಬಳಸಲು ಕ್ರಮಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ. ಆಟೋ ಚಾಲಕರ ಮನವೂಲಿಸಿ ಸಬ್ಸಿಡಿ ದರದಲ್ಲಿ ನ್ಯಾನೋ ಕಾರು ಖರೀದಿಗೆ ಅವಕಾಶ ಮಾಡಿಕೊಟ್ಟರೆ ಆಟೋ ಚಾಲಕರು ಒಪ್ಪಿಗೆ ಸೂಚಿಸಬಹುದು ಎಂದು ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಬುಧವಾರ ಹಮ್ಮಿಕೊಂಡಿದ್ದ 'ಸಾರಿಗೆ ಶೃಂಗಸಭೆ' ಕಾರ್ಯಕ್ರಮದಲ್ಲಿ ಅವರು ಹೀಗೆಂದರು. ನಗರದಲ್ಲಿ ಈಗಾಗಲೇ ಸಂಚಾರ ದಟ್ಟಣೆ ತೀವ್ರವಾಗಿದೆ, ಸುಗಮ ಸಂಚಾರ ಕಲ್ಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಅಗ್ಗದ ದರದಲ್ಲಿ ವಾಹನಗಳು ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ನ್ಯಾನೋ ಕಾರು ಮಾರುಕಟ್ಟೆಗೆ ಬಂದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆಟೋ ಬದಲು ನ್ಯಾನೋ ಕಾರು ಖರೀದಿಸುವಂತೆ ಆಟೋ ಚಾಲಕರನ್ನು ಮನವೂಲಿಸುವ ಕೆಲಸ ಆಗಬೇಕಾಗಿದೆ ಎಂದರು.

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಹತ್ತಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅವುಗಳನ್ನೆಲ್ಲಾ ಒಂದೇ ಸಂಸ್ಥೆಯ ಅಡಿಯಲ್ಲಿ ತಂದು ಒಟ್ಟಿಗೆ ಕಾರ್ಯ ನಿರ್ವಹಿಸುವಂತೆ ಮಾಡಬೇಕಾದ ಅಗತ್ಯವಿದೆ. ಇದರಿಂದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ನ್ಯಾನೋ ಕಾರು ಘಟಕ ಸ್ಥಾಪನೆಗೆ ಕರ್ನಾಟಕದ ಆಹ್ವಾನ
ಕನಸಿನ ನ್ಯಾನೋ ಕಾರೂ ಇನ್ನು ಗಗನ ಕುಸುಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+