ಈ ವರ್ಷ 25 ಸಾವಿರ ಉದ್ಯೋಗಿಗಳು ಮಾತ್ರ ಇನ್ಫಿಗೆ
ಸಿಂಗಪುರ, ಸೆ. 10 : ಭಾರತದ ಎರಡನೇ ಅತಿದೊಡ್ಡ ಸಾಫ್ಟವೇರ್ ಕಂಪೆನಿ, ಪ್ರಸಕ್ತ ವರ್ಷದಲ್ಲಿ ಸುಮಾರು 25 ಸಾವಿರ ಉದ್ಯೋಗಿಗಳನ್ನು ಮಾತ್ರ ಕಂಪೆನಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಹಾಗೂ ಆಯ್ದ ಇತರೆ ಕಂಪೆನಿಗಳೊಡನೆ ವಿಲೀನ ಹಾಗೂ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಇಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಇನ್ಫಿ ಸಿಇಒ ಗೋಪಾಲಕೃಷ್ಣನ್ ಹೇಳಿದ್ದಾರೆ.
ಯುರೋಪ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಂಪೆನಿ ವಿಸ್ತರಣೆಗೆ ಒತ್ತು ನೀಡಲಾಗುತ್ತಿದೆ. ಯುರೋಪಿಯನ್ ಸಾಫ್ಟ್ ವೇರ್ ಮಾರುಕಟ್ಟೆಯಲ್ಲಿ ಟಿಸಿಎಸ್ ಜತೆ ಪೈಪೋಟಿ ಇದೆ. ಈ ಬಗ್ಗೆ ಗಮನ ಹರಿಸಲಾಗಿದೆ. ಈ ನಿಟ್ಟಿನಲ್ಲಿ ಕಳೆದ ತಿಂಗಳು ಯುಕೆ ಮೂಲದ ಆಕ್ಸಾನ್ ಕಂಪೆನಿಯನ್ನು ಇನ್ಫಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಗೋಪಾಲ ಕೃಷ್ಣನ್ ಹೇಳಿದರು.
ಇದಲ್ಲದೆ, ಬೆಂಗಳೂರು ಮೂಲದ ಇನ್ಫೋಸಿಸ್ ಪ್ರಸಕ್ತ ವರ್ಷ ನೇಮಕಾತಿ ಸಂಖ್ಯೆಯನ್ನು ನಿಗದಿಪಡಿಸಿದ್ದು, ವಿವಿಧೆಡೆಗಳಲ್ಲಿ 25 ಸಾವಿರ ಉದ್ಯೋಗಿಗಳನ್ನು ಕಂಪೆನಿಗೆ ನೇಮಕಮಾಡಲಾಗುವುದು. ಮುಂದಿನ ಎರಡು, ಮೂರು ವರ್ಷಗಳಲ್ಲಿ ಚೀನಾದಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಲಾಗುವುದು. ಲ್ಯಾಟಿನ್ ಅಮೆರಿಕ, ಯುರೋಪ್ ಗಳಲ್ಲಿನ ಇನ್ಫಿ ಕೇಂದ್ರಗಳಿಗೆ ಹೆಚ್ಚಿನ ಉದ್ಯೋಗಿಗಳ ನೇಮಕಾತಿ ನಡೆಯಲಿದೆ ಎಂದು ಗೋಪಾಲ ಕೃಷ್ಣನ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications