ಬೂಕರ್ ಪ್ರಶಸ್ತಿಗೆ ಅರವಿಂದ್ ಕೃತಿ ಪರಿಗಣನೆ

ಲಂಡನ್, ಸೆ. 10 : ಇಂಗ್ಲಿಷ್ ಸಾಹಿತ್ಯದ ಪ್ರತಿಷ್ಠಿತ ಪ್ರಶಸ್ತಿ ಎನಿಸಿರುವ 'ಬೂಕರ್' ಪ್ರಶಸ್ತಿಗೆ ನಾಮಕರಣಗೊಳ್ಳುವ ಸಾಹಿತಿಗಳ ಸಾಲಿನಲ್ಲಿ ಭಾರತೀಯ ಮೂಲದ ಸಾಹಿತಿಗಳ ಪ್ರಾಬಲ್ಯ ಮುಂದುವರೆದಿದೆ. ಅರವಿಂದ ಅಡಿಗ, ಅಮಿತಾವ್ ಘೋಷ್ ಅವರನ್ನು 2008ನೇ ಸಾಲಿನ ಪ್ರಶಸ್ತಿಯ ಅಂತಿನ ಸುತ್ತಿನ ಆಯ್ಕೆಗಾಗಿ ಪರಿಗಣಿಸಲಾಗಿದೆ.

ಅರವಿಂದ ಅಡಿಗ ಅವರ ಕಾದಂಬರಿ 'ದ ವೈಟ್ ಟೈಗರ್' ಕೃತಿಯನ್ನು ಪ್ರಶಸ್ತಿಗೆ ಆಯ್ಕೆಯಾಗುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರಶಸ್ತಿಗಾಗಿ ಆಯ್ಕೆ ಮಾಡಿರುವ ಆರು ಮಂದಿ ಸಾಹಿತಿಗಳ ಪೈಕಿ ಅಡಿಗ (34) ಅತಿ ಕಿರಿಯ ವಯಸ್ಸಿನವರಾಗಿದ್ದಾರೆ. ಖ್ಯಾತ ಮಾನವ ಶಾಸ್ತ್ರ ಬರಹಗಾರ ಅಮಿತಾವ್ ಘೋಷ್ ಅವರು ಭಾರತದ ಅತ್ಯುತ್ತಮ ಇಂಗ್ಲಿಷ್ ಬರಹಗಾರರಾಗಿದ್ದು, ಅವರ 'ದ ಸೀ ಆಫ್ ಪೊಪ್ಪೀಸ್' ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಇದಲ್ಲದೇ ಸಬಾಸ್ಟಿಯನ್ ಬ್ಯಾರಿ (ದ ಸಿಕ್ರೇಟ್ ಸ್ಕ್ರಿಪ್ಟರ್), ಲಿಂಡಾ ಗ್ರಾಂಟ್ (ದ ಕ್ಲಾಥ್ಸ್ ಆನ್ ದೇರ್ ಬ್ಯಾಕ್ಸ್), ಫಿಲಿಪ್ ಹೆನ್ಸೇರ್ (ದ ನಾರ್ದನ್ ಕ್ಲೇಮೆನ್ಸಿ), ಸ್ಟೀವ್ ಟೋಲ್ಸ್ (ಎ ಪ್ರಾಕ್ಸನ್ ಆಫ್ ದ ಹೋಲ್) ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಕೊನೆಯ ಗಳಿಗೆಯಲ್ಲಿ ಸಲ್ಮಾನ್ ರಶ್ದಿ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗುವಲ್ಲಿ ವಿಫಲವಾಯಿತು.

1968 ರಿಂದ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಗಿದೆ. ಇಲ್ಲಿವರೆಗೂ ಪ್ರಪಂಚದ ವಿವಿಧ ದೇಶಗಳ 48 ಸಾಹಿತಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಕ್ಟೋಬರ್ 14 ರಂದು ಲಂಡನ್ ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

(ದಟ್ಸ್ ಕನ್ನಡ ವಾರ್ತೆ)
'ಬೂಕರ್' ಕಣದಲ್ಲಿ ಕನ್ನಡಿಗ ಅರವಿಂದ ಅಡಿಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+