ಭಯೋತ್ಪಾದನೆ ಹತ್ತಿಕ್ಕಲು ಪಾಕ್ ಗೆ ಬೆಂಬಲ

ಇಸ್ಲಾಮಾಬಾದ್, ಸೆ. 10 : ದೇಶದಲ್ಲಿ ಹೆಚ್ಚಾಗಿರುವ ಭಯೋತ್ಪಾದಕರ ಹಾವಳಿಯನ್ನು ನಿಗ್ರಹಿಸಲು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಜಂಟಿ ಒಪ್ಪಂದ ಮಾಡಿಕೊಂಡಿವೆ. ಪಾಕಿಸ್ತಾನದ 13ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಆಸೀಫ್ ಅಲಿ ಜರ್ದಾರಿ ಅವರುಅಫಘಾನಿಸ್ತಾನ ದ ಅಧ್ಯಕ್ಷ ಹಮೀದ್ ಖರ್ಜಾಯಿ ಅವರೊಂದಿಗೆ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಉಗ್ರರ ಹಾವಳಿ ಎಲ್ಲೆ ಮೀರಿದೆ. ಪರಿಣಾಮವಾಗಿ ಉಭಯ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯ ಸರ್ವೆಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಉಗ್ರರ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಪಾಕ್ ನ ನೂತನ ಅಧ್ಯಕ್ಷ ಜರ್ದಾರಿ ಅವರು ಉಗ್ರರ ವಿರುದ್ಧ ಹೋರಾಡಲು ಕೈಜೋಡಿಸಿದ್ದಾರೆ ಎಂದು ಅಪಘಾನಿಸ್ತಾನದ ಅಧ್ಯಕ್ಷ ಹಮೀದ್ ಖರ್ಜಾಯಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಉಗ್ರರು ನೆಲೆಸಿದ್ದಾರೆ ಎನ್ನುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಜರ್ದಾರಿ, ಭಯೋತ್ಪಾದನಾ ಸಂಘಟನೆಗೆ ಪಾಕ್ ಸರ್ಕಾರ ತುಂಡು ನೆಲವನ್ನು ಕೊಟ್ಟಿಲ್ಲ ಎಂದು ಹೇಳಿದರು. ಉಭಯ ದೇಶಗಳ ಬಾಂಧವ್ಯ ವೃದ್ಧಿಸಲು ಅಫಘಾನಿಸ್ತಾನದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದು, ಉಗ್ರರ ವಿರುದ್ಧ ಹೋರಾಟ ಮುಂದುವರೆಸಲಾಗುವುದು ಎಂದು ಜರ್ದಾರಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+