ಅಣು ಒಪ್ಪಂದ ದೇಶದ ಅಭಿವೃದ್ಧಿಗೆ ಪೂರಕ : ಸೋನಿಯಾ
ಈರೋಡ್, ಸೆ. 5 : ಭಾರತ ಅಮೆರಿಕ ಪರಮಾಣು ಒಪ್ಪಂದ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಒಪ್ಪಂದಕ್ಕೆ ವಿರೋಧ ಬೇಡ ಎಂದು ಪ್ರತಿಪಕ್ಷ ನಾಯಕರಿಗೆ ಅವರು ಮನವಿ ಮಾಡಿಕೊಂಡರು. ಭಾರತ ಅಮೆರಿಕ ನಡುವಿನ ಒಪ್ಪಂದ ಜಾರಿಗೊಂಡಿಲ್ಲ. ಆದರೆ ಒಪ್ಪಂದಲ್ಲಿ ಇದುವರೆಗೂ ಬಹಿರಂಗಗೊಳ್ಳದ, ಹಾಗೂ ಭಾರತಕ್ಕೆ ಕಂಟಕಪ್ರಾಯವಾಗಬಹುದಾದ ಹಲವು ಮಹತ್ವದ ಮಾಹಿತಿಗಳನ್ನು ಒಳಗೊಂಡ ಪತ್ರ ಬುಧವಾರ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಅವರು ಈ ವಿಷಯ ಸ್ಪಷ್ಟಪಡಿಸಿದರು.
ಭಾರತ ನೂರು ಕೋಟಿ ಜನರನ್ನು ಹೊಂದಿರುವ ಬೃಹತ್ ದೇಶ, ದೇಶದ ಸಮಗ್ರ ಅಭಿವೃದ್ಧಿಗೆ ಇಂಧನ ಅತ್ಯವಶ್ಯಕವಾಗಿದೆ ಎಂದು ಪ್ರತಿಪಾದಿಸಿದ ಅವರು, ಪ್ರತಿಪಕ್ಷಗಳು ಒಪ್ಪಂದ ಕುರಿತಂತೆ ಅಪಪ್ರಚಾರ ಮಾಡತೊಡಗಿವೆ ಎಂದು ದೂರಿದರು. ದೇಶದ ಸಾರ್ವಭೌಮತೆಗೆ ಧಕ್ಕೆ ಆಗುವಂತ ಗುರುತರವಾದ ಅಪಾಯ ಒಪ್ಪಂದದಲ್ಲಿ ಇಲ್ಲ. ಆದ್ದರಿಂದ ಒಪ್ಪಂದ ಕುರಿತು ಎಲ್ಲರೂ ನಂಬಿಕೆ ಹೊಂದಬೇಕು. ಈ ಮೂಲಕ ಭಾರತ ಶಕ್ತಿಶಾಲಿ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸೋನಿಯಾ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಸೆಪ್ಟೆಂಬರ್ ಒಳಗೆ ಅಣು ಒಪ್ಪಂದ ಸಹಿ : ಅಮೆರಿಕ
ಯುಪಿಎಯಿಂದ ಸಾಂಸ್ಕೃತಿಕ ಭಯೋತ್ಪಾದನೆ
ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್












Click it and Unblock the Notifications