ಸೆ. 5ರಂದುಅನಿಮೇಷನ್ ಹಬ್ಬ ಪ್ರಾರಂಭ
ಬೆಂಗಳೂರು, ಸೆ. 4 : ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಜೆ.ಎನ್.ಟಾಟಾ ಸಭಾಂಗಣದಲ್ಲಿ ಬೆಂಗಳೂರು ಅನಿಮೇಷನ್ ಉದ್ಯಮದಾರ ಸಂಸ್ಥೆ ಏರ್ಪಡಿಸಿರುವ ಅಭಯ್ ಫೆಸ್ಟ್ 2008 ಕಾರ್ಯಕ್ರಮ ಸೆ. 5 ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿದ್ಯಾಶಂಕರ್ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಆರ್. ಕೆ. ಲಕ್ಷ್ಮಣ ಹಾಗೂ ಚಂದಮಾಮ ಪತ್ರಿಕೆಯ ಮಾಲೀಕ ವಿಶ್ವಂ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications