ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಮಾಯಾವತಿಗೆ ಸ್ಥಾನ
ನ್ಯೂಯಾರ್ಕ್, ಆ.29:ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರ ಮೋಡಿಗೆ ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ ಸಹ ತಲೆ ತೂಗಿದೆ. ವಿಶ್ವದ ನೂರು ಮಂದಿ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿ ಸ್ಥಾನ ಕಲ್ಪಿಸಲಾಗಿದೆ.
ಇದೇ ಮೊದಲ ಬಾರಿಗೆ ಮಾಯಾವತಿ ಫೋರ್ಬ್ಸ್ ಪಟ್ಟಿಗೆ ಸೇರಿದ್ದು ವಿಶ್ವದ ಪ್ರಬಲ ಮಹಿಳೆಯರ ಸಾಲಿನಲ್ಲಿ ಅವರು 59ನೇ ಸ್ಥಾನದಲ್ಲಿದ್ದಾರೆ. ಮಾಯಾವತಿ ಅವರನ್ನು ಫೋರ್ಬ್ಸ್ 'ಉದಯಿಸುತ್ತಿರುವ ಹೊಸ ನಕ್ಷತ್ರ' ಎಂದು ಬಣ್ಣಿಸಿದೆ. ಸೋನಿಯಾ ಗಾಂಧಿಗೆ ಪೈಪೋಟಿ ನೀಡುತ್ತಿರುವ ನಾಯಕಿ ಎಂದು ಹೇಳಿದೆ.
ಹಾಗೆಯೇ ಇಟಲಿ ಮೂಲದ ಸೋನಿಯಾ ಭಾರತದ ಅತ್ಯಂತ ಪ್ರಬಲ ಪಕ್ಷದ ಮುಂಚೂಣಿ ನಾಯಕಿ ಹಿರಿಯ ರಾಜನೀತಜ್ಞೆ ಎಂದು ಫೋರ್ಬ್ಸ್ ಕೊಂಡಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಜನಪ್ರಿಯತೆ ಈ ವರ್ಷ ಕೊಂಚ ಕುಸಿದಿದೆ. ಕಳೆದ ಬಾರಿ ಅವರು 6ನೇ ಸ್ಥಾನದಲ್ಲಿದ್ದರು ಈ ವರ್ಷ ಸೋನಿಯಾ ಅವರ ಸ್ಥಾನ 21ನೇ ಸ್ಥಾನಕ್ಕೆ ಕುಸಿದಿದೆ.
ಪೆಪ್ಸಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ ಭಾರತೀಯ ಸಂಜಾತೆ ಇಂದ್ರಾ ನೂಯಿ ಮೂರನೇ ಸ್ಥಾನದಲ್ಲಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ 99ನೇ ಸ್ಥಾನದಲ್ಲಿದ್ದರೆ ಜರ್ನನಿಯ ಛಾನ್ಸಲರ್ ಆಂಜಲಾ ಮಾರ್ಕೆಲ್ ಪ್ರಥಮ ಸ್ಥಾನದಲ್ಲಿದ್ದಾರೆ.
(ಏಜೆನ್ಸೀಸ್)
ಬೆಂಗಳೂರಿನ 'ಬಂಧನ್' ಫೋರ್ಬ್ಸ್ ಪಟ್ಟಿಯಲ್ಲಿ












Click it and Unblock the Notifications