ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ಒಳಗೆ ಅಣು ಒಪ್ಪಂದ ಸಹಿ : ಅಮೆರಿಕ

By Staff
|
Google Oneindia Kannada News

ವಾಷಿಂಗ್ ಟನ್, ಆ. 27 : ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರ ಅಧಿಕಾರವಧಿ ಜನವರಿಯಲ್ಲಿ ಕೊನೆಗೊಳ್ಳಲಿದ್ದು, ಸೆಫ್ಟಂಬರ್ ತಿಂಗಳೊಳಗೆ ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಅಧಿಕೃತ ಮುದ್ರೆಗಾಗಿ ಬುಷ್ ಆಡಳಿತ ತೆರೆಮರೆಯಲ್ಲಿ ಭಾರಿ ಪ್ರಯತ್ನ ನಡೆಸಿದೆ.

ಜುಲೈ ತಿಂಗಳ ನಡೆದ ಐಎಇಎ ಸಭೆಯಲ್ಲಿ ಈ ಒಪ್ಪಂದಕ್ಕೆ ಹಸಿರು ನಿಶಾನೆ ತೋರಿಸಿ ಸಹಮತ ತೋರಿಸಿತ್ತು. ಆದರೆ ಇತ್ತೀಚೆಗೆ ವಿಯನ್ನಾ ನಡೆದ ಎನ್ ಎಸ್ ಜಿ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುವಲ್ಲಿ ಭಾರತ ವಿಫಲವಾಗಿದೆ. ಸೆಫ್ಟಂಬರ್ ತಿಂಗಳೊಳಗೆ ಭಾರತ ಅಮೆರಿಕ ಅಣು ಬಂಧಕ್ಕೆ ಅಂತಿಮ ರೂಪುರೇಷ ನೀಡಲಾಗುವುದು ಎಂದು ಬುಷ್ ಆಡಳಿತ ಪ್ರಧಾನ ಕಾರ್ಯದರ್ಶಿ ಕಂಡೋಲಿಜಾ ರೈಸ್ ತಿಳಿಸಿದ್ದಾರೆ.

ಎನ್ ಎಸ್ ಜಿ ರಾಷ್ಟ್ರಗಳ ಸಹಿ ಬಿದ್ದ ನಂತರ ಒಪ್ಪಂದಕ್ಕೆ ಇನ್ನೊಂದು ಕಂಟಕವಿದೆ. ಮುಖ್ಯವಾಗಿ ಅಮೆರಿಕ ಕಾಂಗ್ರೆಸ್ ನ ಸಭೆಯ ಮುಂದೆ ಒಪ್ಪಂದ ಬರಲಿದೆ. ಅದರಲ್ಲಿ ಯಶಸ್ವಿ ಗಳಿಸಬೇಕಾಗಿರುವುದು ಮಹತ್ವದ ಕೆಲಸ ಎಂದು ರೈಸ್ ಹೇಳಿದರು. ಆದ್ದರಿಂದ ಎನ್ಎಸ್ ಜಿ ರಾಷ್ಟ್ರಗಳ ಸದಸ್ಯ ರಾಷ್ಟ್ರಗಳಿಗೆ ಈ ಬಗ್ಗೆ ಎಲ್ಲ ವಿಷಯವನ್ನು ಮನವರಿಕೆ ಮಾಡಿಕೊಟ್ಟ ಅವರಿಂದ ಸಹಿ ಪಡೆದುಕೊಂಡು ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಕಾಂಗ್ರೆಸ್ ಮುಂದೆ ಒಪ್ಪಂದವನ್ನು ತರಲಾಗುವುದು ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಎನ್ಎಸ್ ಜಿ ಸಭೆ ವಿಫಲ : ಚಿಂತೆಯಲ್ಲಿ ಯುಪಿಎ
ಸಿಟಿಬಿಟಿಗೆ ಸಹಿ ಹಾಕಲು ಭಾರತಕ್ಕೆ ಒತ್ತಾಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X