ಸೂರತ್ ಸ್ಫೋಟದ ಸೂತ್ರದಾರ ಅಬು ಬಶೀರ್

ಅಹಮದಾಬಾದ್, ಆ. 27 : ಕಳೆದ ತಿಂಗಳು ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮುಖ್ಯ ರುವಾರಿ ಅಬು ಬಶೀರ್ ವಾಣಿಜ್ಯ ನಗರಿ ಎಂದೇ ಖ್ಯಾತಿ ಹೊಂದಿರುವ ಸೂರತ್ ನಗರವನ್ನು ಸ್ಫೋಟಿಸಲು ಬಾಂಬ್ ಅಡಗಿಸಿಟ್ಟಿದ್ದ ಕೃತ್ಯವೂ ಅಬು ಬಶೀರ್ ನ ಕೈಚಳಕದಿಂದಲೇ ನಡೆದಿದೆ ಎಂದು ಅಹಮದಾಬಾದ್ ಪೊಲೀಸ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಪೊಲೀಸ್ ಮಹಾನಿರ್ದೇಶಕ ಪಿ.ಸಿ.ಪಾಂಡೆ, ಬಾಂಬ್ ಸ್ಫೋಟ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಲಾಗಿದ್ದು, ಸುದೀರ್ಘ ವಿಚಾರಣೆ ನಂತರ ಅಹಮದಾಬಾದ್ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿರುವ ಅಬು ಬಶೀರ್ ಸೂರತ್ ನಲ್ಲಿಯೂ ಕೂಡಾ ಬಾಂಬ್ ಸ್ಫೋಟಿಸುವ ವ್ಯವಸ್ಥಿತ ಸಂಚು ರೂಪಿಸಿದ್ದ ಎಂದ ತಿಳಿಸಿದ್ದಾರೆ. ಸೂರತ್ ನಲ್ಲಿ ದೊರೆಕಿರುವ ಜೀವಂತ ಬಾಂಬ್ ಭಾರಿ ಪ್ರಬಲ ಬಾಂಬ್ ಗಳಾಗಿದ್ದು, ಸ್ಫೋಟ ಘಟನೆ ನಡೆದಿದ್ದರೆ, ಭಾರಿ ಅನಾಹುತ ಕಾದಿತ್ತು ಎಂದು ಹೇಳಿದ್ದಾರೆ.

ಕಳೆದ ತಿಂಗಳು ಜು.26 ರಂದು ಅಹಮದಾಬಾದ್ ನಲ್ಲಿ ಸುಮಾರು 17 ಕಡೆಗಳಲ್ಲಿ ಬಾಂಬ್ ಸ್ಫೋಟಗೊಳಿಸಲಾಗಿತ್ತು. ಘಟನೆಯಲ್ಲಿ 60ಕ್ಕೂ ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. ಅದಕ್ಕಿಂತ ಒಂದು ಮುಂಚೆ ಜು. 25 ರಂದು ಬೆಂಗಳೂರಿನಲ್ಲಿ 7 ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಒಬ್ಬ ಮಹಿಳೆ ಮೃತಪಟ್ಟು 6 ಜನರಿಗೆ ಗಾಯವಾಗಿತ್ತು. ಇಂಡಿಯನ್ ಮುಜಾಹೀದಿನ್ ಉಗ್ರರ ಸಂಘಟನೆ ಘಟನೆಯ ಹೊತ್ತುಕೊಂಡಿತ್ತು. ಸಿಮಿ ಉಗ್ರರ ಕೈವಾಡವಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಬಂಧಿತ ಅಬು ಬಶೀರ್ ಸಿಮಿ ಸಂಘಟನೆ ಸಕ್ರಿಯ ಕಾರ್ಯಕರ್ತವಾಗಿದ್ದಾನೆ.

(ದಟ್ಸ್ ಕನ್ನಡ ವಾರ್ತೆ)

ಸಿಮಿ ನಿಷೇಧ ಮುಂದುವರಿಕೆ : ಸುಪ್ರಿಂಕೋರ್ಟ್
ಜೈಪುರ ಸ್ಫೋಟಕ್ಕೆ ನಗರದ ವೈದ್ಯ ವಿದ್ಯಾರ್ಥಿ ನೆರವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+