ಭಾರತದ ಮೊಬೈಲ್ ಪ್ರಿಯರ ಕೈಗೆ ಆಫೆಲ್ ಐಫೋನ್
ಬೆಂಗಳೂರು,ಆ.22: ಭಾರತದ ಮೊಬೈಲ್ ಪ್ರಿಯರು ತೀರಾ ಕಾತುರದಿಂದ ಎದುರು ನೋಡುತ್ತಿದ್ದ ಆಪೆಲ್ ಕಂಪನಿಯ 3ಜಿ ಐಫೋನ್ ಏರ್‍ಟೆಲ್ ಹಾಗೂ ವೊಡಫೋನ್ ಸಹಯೋಗದೊಂದಿಗೆ ಗುರುವಾರ ಮಧ್ಯರಾತ್ರಿ ದೇಶದಾದ್ಯಂತ ಬಿಡುಗಡೆಯಾಯಿತು.
ಬೆಂಗಳೂರಿನ ಏರ್‌ಟೆಲ್ ಕೇಂದ್ರ ಕಚೇರಿಯಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಚಿತ್ರನಟರಾದ ಸುದೀಪ್ ಮತ್ತು ಪುನೀತ್ ರಾಜ್‌ಕುಮಾರ್ 3ಜಿ ಐಫೋನನ್ನು ಬಿಡುಗಡೆ ಮಾಡಿದರು. ಮೊದಲ ಸೆಟ್ಟನ್ನು ಸುದೀಪ್ ಖರೀದಿಸುವ ಮೂಲಕ ಮಾರಾಟಕ್ಕೆ ಚಾಲನೆ ಕೊಟ್ಟರು. ಭಾರತದಲ್ಲಿ 8 ಜಿಬಿ ಹಾಗೂ 16 ಜಿಬಿ ಸಾಮರ್ಥ್ಯದ ಫೋನ್‌ಗಳ ದರ ಕ್ರಮವಾಗಿ 31 ಸಾವಿರ ಹಾಗೂ 36 ಸಾವಿರ ರು.ಗಳಾಗಿದ್ದು ಎಲ್ಲಾ ಏರ್‌ಟೆಲ್ ಮಳಿಗೆಗಳೂ ಸೇರಿದಂತೆ ಭಾರತಿ ಮತ್ತು ವೊಡಫೋನ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.
3ಜಿ ಐಫೋನ್ ಹ್ಯಾಂಡ್‌ಸೆಟ್‌ಗಳು ಬೆಂಗಳೂರು ಸೇರಿದಂತೆ ನವದೆಹಲಿ,ಮುಂಬೈ,ಕೋಲ್ಕತ್ತಾ,ಚೆನ್ನ್ನೈಮತ್ತು ಹೈದರಾಬಾದ್ ನಗರಗಳಲ್ಲಿ ಕಳೆದ ರಾತ್ರಿಯಿಂದಲೇ ಸಿಗುತ್ತಿದ್ದು, ಶುಕ್ರವಾರದಿಂದ ದೇಶದ 65 ನಗರಗಳಲ್ಲಿ ಲಭ್ಯವಾಗಲಿದೆ . ಪ್ರಸ್ತುತ ಭಾರತದಲ್ಲಿ 30 ಸಾವಿರದಷ್ಟು 2ಜಿ ಐಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಏರ್‌ಟೆಲ್ ಅಧ್ಯಕ್ಷ ಸಂಜಯ್ ಕಪೂರ್ ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)
ಪೂರಕ ಓದಿಗೆ:
ಆ.22ಕ್ಕೆ ಏರ್ ಟೆಲ್, ವೊಡಾಫೋನ್ ಐಫೋನ್ ಬಿಡುಗಡೆ
ಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ-3ಜಿ ಐಫೋನ್
ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಜಾಬ್ಸ್ !












Click it and Unblock the Notifications