ಟೇಬಲ್ ಟೆನ್ನಿಸ್ :ಒಲಿಂಪಿಕ್ಸ್ ನಿಂದ ಕಮಲ್ ಔಟ್
ಬೀಜಿಂಗ್, ಆ. 20 : ಭಾರತೀಯ ಟೇಬಲ್ ಟೆನ್ನಿಸ್ ತಾರೆ ಶರತ್ ಕಮಲ್ ಅವರು ಮೂರನೇ ಸುತ್ತಿನ ಪುರುಷರ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಆಸ್ಚ್ರೀಯಾದ ವೇಕ್ಸಿಂಗ್ ಚೆನ್ ವಿರುದ್ಧ ಸೋಲನುಭವಿಸಿ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದರು.
ಭಾರತೀಯ ಕ್ರೀಡಾಪಟುಗಳು ಒಬ್ಬರಂತೆ ಕ್ರೀಡಾಕೂಟದಿಂದ ಹೊರಬೀಳುತ್ತಿದ್ದು, ಬುಧವಾರ ನಡೆದ ಪಂದ್ಯದಲ್ಲಿ ಶರತ್ ಕಮಲ್ ಅವರು ಆಸ್ಚ್ರೀಯಾ ವೇಕ್ಸಿಂಗ್ ಚೆನ್ ವಿರುದ್ಧ 11-5, 14-12, 11-2, 8-11, 10-12 ಅಂಕಗಳ ಮೂಲಕ ಸೋತು ಹೋರಬಿದ್ದರು. ಶರತ್ ಕಮಲ್ ಅವರು ಎರಡನೇ ಮತ್ತು ಐದನೇ ಸುತ್ತಿನಲ್ಲಿ ಆಸ್ತ್ರೀಯಾ ಆಟಗಾರನಿಗೆ ಬಲವಾದ ಪೈಪೋಟಿ ನೀಡಿದರಾದರೂ ಆಸ್ಟ್ರೀಯಾ ಆಟಗಾರ ಮುಂದೆ ಯಾವ ಇವರ ಆಟ ನಡೆಯಲಿಲ್ಲ.
ಆಸ್ತ್ರೀಯಾ ಆಟಗಾರ ಮೊದಲಿನಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರಿಂದ ಜಯ ಸುಲಭವಾಗಿ ದಕ್ಕಿಸಿಕೊಳ್ಳವಲ್ಲಿ ಯಶಸ್ವಿಯಾದರು. ಕಳೆದ ಮಂಗಳವಾರ ಶರತ್ ಕಮಲ್ ಸ್ಪೇನ್ ಆಟಗಾರ ಅಲ್ ಫ್ರೇಡ್ ಕಾರ್ನೇರೋಸ್ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಒಲಿಂಪಿಕ್ಸ್ :ಲಾಂಗ್ ಜಂಪ್ ಪಟು ಅಂಜು ಹೊರಕ್ಕೆ












Click it and Unblock the Notifications