ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಆಸೆ ಭಗ್ನ
ಬೀಜಿಂಗ್, ಆ.20: ಉತ್ತಮ ಪೈಪೋಟಿಯ ನಡುವೆಯೂ ಭಾರತದ ಬಾಕ್ಸರ್ ಜಿತೇಂದರ್ ಕುಮಾರ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇಂದು ನಡೆದ 51 ಕೆಜಿ ಫ್ಲೈವೈಟ್ ವಿಭಾಗದಲ್ಲಿ ರಷ್ಯಾದ ಎದುರಾಳಿ ಜಾರ್ಜ್ ಬಾಲಕ್ ಸಿನ್ ವಿರುದ್ಧ ಸೋಲುಂಡಿದ್ದಾರೆ.
ಮೊದಲೆರಡು ಸುತ್ತಿನಲ್ಲಿ ಪೈಪೋಟಿ ನೀಡಿದ ಜಿತೇಂದರ್ ಮೂರನೇ ಸುತ್ತಿನ ಅಂತ್ಯಕ್ಕೆ 13-8 ರ ಹಿನ್ನೆಡೆ ಅನುಭವಿಸಿದರು. ಕಗಳಿಕೆಯಲ್ಲಿ ಮುಂದಿದ್ದ ರಷ್ಯಾ ಆಟಗಾರ ಮೂರನೇ ಸುತ್ತಿನ ನಂತರ ರಕ್ಷಣಾತ್ಮಕವಾಗಿ ಆಡಿ, ಪಂದ್ಯವನ್ನು ತನ್ನದಾಗಿಸಿಕೊಂಡರು. ಅಂತಿಮವಾಗಿ ರಷ್ಯಾದ ಆಟಗಾರ 15-11 ಅಂತರದಿಂದ ಪಂದ್ಯ ಗೆದ್ದರು.
ಪದಕ ಗೆಲ್ಲದಿದ್ದರೂ, ಪ್ರಥಮ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದ 21 ವರ್ಷದ ಜಿತೇಂದರ್ ಅವರ ಸಾಧನೆಯನ್ನು ತೆಗೆದುಹಾಕುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)
ಒಲಿಂಪಿಕ್ಸ್ :ಭಾರತದ ಕುಸ್ತಿಪಟು ಸುಶೀಲ್ ಗೆ ಕಂಚು
ಟೇಬಲ್ ಟೆನ್ನಿಸ್ :ಒಲಿಂಪಿಕ್ಸ್ ನಿಂದ ಕಮಲ್ ಔಟ್












Click it and Unblock the Notifications