ಆಗಸ್ಟ್14ರಂದು ಪರ್ವೇಜ್ ಮುಷರಪ್ ಪದವಿ ತ್ಯಾಗ!

ಇಸ್ಲಾಮಾಬಾದ್, ಆ.13: ಕೊನೆಗೂ ಪಾಕಿಸ್ತಾನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಪರ್ವೇಜ್ ಮುಷಾರಪ್ ನಿರ್ಧರಿಸಿದ್ದಾರೆ. ಇದಕ್ಕಾಗಿ ಆಗಸ್ಟ್ 14ರ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಮೂಹೂರ್ತ ನಿರ್ಧಾರವಾಗಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ಹಿರಿಯ ನಾಯಕರ ಪ್ರಕಾರ, ಮುಷಾರಪ್ ವಿರುದ್ಧ ದೋಷಾರೋಪ ಹೊರಿಸಲಾಗಿರುವ ಕಾರಣ ಸ್ವತಃ ಅವರೇ ತಮ್ಮ ಅಧ್ಯಕ್ಷ ಪದವಿಯನ್ನು ತೊರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಆಗಸ್ಟ್ 14ರಂದೇ ಅವರು ಪಾಕಿಸ್ತಾನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈಗ ಅದೇ ಮುಹೂರ್ತದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಪಾಕಿಸ್ತಾನದ ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ರಾಜಕೀಯ ಪಕ್ಷಗಳು ಆ.14ರಂದು ಪರ್ವೇಜ್ ಮುಷಾರಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಈ ಮುಂಚೆಯೇ ನಿರ್ಧರಿಸಿದ್ದವು. ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುವ ಸಮಯದಲ್ಲಿ ನ್ಯಾಯವ್ಯವಸ್ಥೆಯನ್ನು ತಮ್ಮಿಷ್ಟದಂತೆ ದುರುಪಯೋಗ ಪಡಿಸಿಕೊಂಡ ಕಾರಣ ಅವರು ಇಡೀ ದೇಶಕ್ಕೆ ಕ್ಷಮಾಪಣೆ ಕೋರಬೇಕೆಂದು ಪಾಕಿಸ್ತಾನದ ರಾಜಕೀಯ ಪಕ್ಷಗಳು ಆಗ್ರಹಿಸಿವೆ.

ಮುಷಾರಪ್ ಮಾಡಿರುವ ತಪ್ಪುಗಳಿಗೆ ತಪ್ಪದೆ ಶಿಕ್ಷೆ ಅನುಭವಿಸಲೇ ಬೇಕು. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಷರೀಪ್ ಗುಟುರು ಹಾಕಿದ್ದಾರೆ. ಮುಷಾರಪ್ ವಿರುದ್ಧ ಕಾನೂನು ರೀತ್ಯಾ ಶಿಕ್ಷೆ ಜಾರಿ ಮಾಡಲಾಗುತ್ತದೆ. ಮುಷಾರಪ್‌ಗೆ ರಾಜೀನಾಮೆಯೇ ದೊಡ್ಡ ಶಿಕ್ಷೆಯಾಗಲಿದೆಯೇ ಅಥವಾ ರಾಜೀನಾಮೆ ನಂತರ ಜೈಲು ಶಿಕ್ಷೆ ವಿಧಿಸಲಾಗುತ್ತದೆಯೇ ಎಂಬುದು ಪಾಕಿಸ್ತಾನದಲ್ಲಿ ಪ್ರಮುಖ ಚರ್ಚನೀಯ ವಿಷಯವಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+