ಆ.17ರ ಭಾನುವಾರ ಭಾಗಶಃ ಚಂದ್ರ ಗ್ರಹಣ
ನವದೆಹಲಿ, ಆ.13:ಆಕಾಶ ವೀಕ್ಷಕರಿಗೆ ಮತ್ತೊಂದು ಸಂತಸ ಸುದ್ದಿ. ಭಾನುವಾರ(ಆ.17) ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. ಬೆಳಗಿನ ಜಾವ 1:06:07 ಆರಂಭವಾಗುವ ಚಂದ್ರಗ್ರಹಣ 4:14:16 ಗಂಟೆಗೆ ಮುಕ್ತಾಯವಾಗಲಿದೆ ಎಂದು ನೆಹರು ತಾರಾಲಯದ ನಿರ್ದೇಶಕಿ ರತ್ನಶ್ರೀ ತಿಳಿಸಿದ್ದಾರೆ.
ಶೇ.80ರಷ್ಟು ಚಂದ್ರನ ಭಾಗ ಗ್ರಹಣಕ್ಕೆ ಒಳಗಾಗಲಿದೆ. ಭಾರತ ಸೇರಿದಂತೆ ಏಷ್ಯಾ, ದಕ್ಷಿಣ ಅಮೆರಿಕ,ಯೂರೋಪ್,ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಖಗೋಳ ವಿಜ್ಞಾನದ ಈ ವೈಚಿತ್ರ್ಯವನ್ನು ನೋಡಿ ಸವಿಯಬಹುದು ಎಂದು ರತ್ನಶ್ರೀ ತಿಳಿಸಿದರು.
ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಿದರೆ ಕಣ್ಣಿಗೆ ಅಪಾಯ ಆದರೆ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಈ ಚಂದ್ರಗ್ರಹಣದ ಮತ್ತೊಂದು ವಿಶೇಷವೆಂದರೆ, ಗ್ರಹಣದ ವಿವಿಧ ಭಾಗಗಳು ವಿಶ್ವದಾದ್ಯಂತ ಒಂದೇ ತೆರನಾಗಿ ಕಾಣಿಸಲಿವೆ. ಆಗಸ್ಟ್16ರ ಸಂಜೆ ಚಂದ್ರೋದಯದೊಂದಿಗೆ ದಕ್ಷಿಣ ಅಮೆರಿಕದಲ್ಲಿ ಹಾಗೂ ಆ.17ರಂದು ಬೆಳಗ್ಗೆ ಚಂದ್ರ ಮುಳುಗುವುದರೊಂದಿಗೆ ಆಸ್ಟ್ರೇಲಿಯಾದ ಚಂದ್ರಗ್ರಹಣ ಗೋಚರಿಸಲಿದೆ ಎಂದು ಅವರು ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications