ಇಂಜಿನಿಯರಿಂಗ್ ಅಧ್ಯಾಪಕರಿಗೆ ವಿಪ್ರೋ ಕೈಪಿಡಿ

Wipro launches resource guides for engineering facultyಬೆಂಗಳೂರು, ಆ. 7: ವಿಪ್ರೋ ಸಂಸ್ಥೆಯ ಲಾಭ ರಹಿತ ಟ್ರಸ್ಟ್ ಆದ ಮಿಷನ್ 10 X ಮೂಲಕ ಇಂಜಿನಿಯರಿಂಗ್ ಅಧ್ಯಾಪಕರಿಗೆ ಅನುಕೂಲವಾಗುವ ವ್ಯವಹಾರಿಕ ಮಾಹಿತಿ ಕೈಪಿಡಿ(resource guides)ಯನ್ನು ಇಂದು ಮಧ್ಯಾಹ್ನ ಅನಾವರಣಗೊಳಿಸಲಾಯಿತು.

ಯೋಜಿತವಾಗಿ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮಿಷನ್ 10 X ಕಾರ್ಯನಿರ್ವಹಿಸಲಿದೆ. ಫ್ಲೂಯಿಡ್ ಮೆಕ್ಯಾನಿಕ್ಸ್ ಹಾಗೂ ಮೈಕ್ರೋಪ್ರೊಸಸರ್ ಬಗ್ಗೆ ಮಹಿತಿ ಕೈಪಿಡಿಯನ್ನು ಸದ್ಯ ತಯಾರಿಸಲಾಗಿದೆ. ಮುಂದೆ ಉಳಿದ ವಿಷಯಗಳಲ್ಲಿ ಮಾಹಿತಿ ಕೈಪಿಡಿ ಲಭ್ಯವಾಗಲಿದೆ ಎಂದು ಮಿಷನ್ 10x ನ ಸಮಿತಿ ಹೇಳಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾದ ಮಿಷನ್ 10X ಟ್ರಸ್ಟ್ ನ ಮೂಲ ಉದ್ದೇಶ ಮಾನವ ಸಂಪನ್ಮೂಲದ ಅಭಿವೃದ್ಧಿ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ಅಧ್ಯಾಪಕರಿಗೆ ಹೆಚ್ಚಿನ ಮಾಹಿತಿ ಒದಗಿಸಿ, ವಿದ್ಯಾರ್ಥಿಗಳಿಗೆ ಬೌದ್ಧಿಕ ಅಭಿವೃದ್ಧಿಗೆ ಕಾರಣವಾಗುವುದು ಹಾಗೂ ಪದವಿ ಪಡೆದ ನಂತರ, ಉದ್ಯೋಗಕ್ಕೆ ಅರ್ಹ ರೀತಿಯಲ್ಲಿ ತಯಾರಿ ಮಾಡುವುದು ಟ್ರಸ್ಟ್ ನ ಗುರಿ.

ಸದ್ಯಕ್ಕೆ ಐದು ರಾಜ್ಯಗಳಲ್ಲಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಪ್ರಮುಖ ವಿಶ್ವವಿದ್ಯಾಲಯಗಳನ್ನು ಮಾಹಿತಿ ಜಾಲಕ್ಕೆ ಒಳಪಡಿಸಲಾಗುವುದು. ಇಂಜಿನಿಯರಿಂಗ್ ಅಧ್ಯಾಪಕರಿಗೆ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು. 2010 ರೊಳಗೆ ಸುಮಾರು 10 ಸಾವಿರ ಅಧ್ಯಾಪಕರು ಈ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ ಎಂದು ವಿಪ್ರೋ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗದ ಕಾರ್ಯಕಾರಿ ಉಪ ನಿರ್ದೇಶಕ ಪ್ರತೀಕ್ ಕುಮಾರ್ ಹೇಳಿದರು.

ಮಿಷನ್ 10X ನ ಉತ್ತಮ ಕಾರ್ಯನಿರ್ವಹಣೆಗಾಗಿ ಸಲಹಾ ಸಮಿತಿಯನ್ನು ಸ್ಥಾಪಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಚಿದಾನಂದ ಗೌಡ, ಪುಣೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಎ.ಎಸ್.ಕೋಲಸ್ಕರ್ ಹಾಗೂ ಎಐಸಿಟಿಇ ಮತ್ತು ಚನ್ನೈ ಐಐಟಿ ಮುಖ್ಯಸ್ಥರಾಗಿದ್ದ ಪ್ರೊ.ಆರ್. ನಟರಾಜ್ ಅವರನ್ನು ಸಲಹಾ ಸಮಿತಿ ಒಳಗೊಂಡಿದೆ. ಅಧ್ಯಾಪಕರಿಗೆ ತರಬೇತಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಬೌದ್ಧಿಕಮಟ್ಟ ಸುಧಾರಣೆ , ಉದ್ಯೋಗಾರ್ಥಿಗಳಿಗೆ ತರಬೇತಿ ಇವೇ ಮುಂತಾದ ವಿವಿಧ ಆಯಾಮಗಳ ಯೋಜನೆಯನ್ನು ಮಿಷನ್ 10X ಒಳಗೊಂಡಿರುತ್ತದೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+