ಹೋಟೆಲ್ ಉದ್ಯಮಕ್ಕೆ ಅಡಿಯಿಟ್ಟ ಗೋಪಿನಾಥ್
ಬೆಂಗಳೂರು, ಆ.7: ಕೇವಲ ಶ್ರೀಮಂತರ ಹಾಗೂ ಉಳ್ಳವರಿಗಷ್ಟೇ ಸೀಮಿತವಾಗಿದ್ದ ವಿಮಾನ ಯಾನವನ್ನು ಮಧ್ಯಮ ವರ್ಗದ ಕುಟುಂಬದವರಿಗೂ ಎಟುಕುವಂತೆ ಮಾಡಿದ ಹೆಗ್ಗಳಿಕೆ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್‌ಗೆ ಸಲ್ಲುತ್ತದೆ. ಭಾರತ ವಿಮಾನ ಯಾನ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದ ಗೋಪಿನಾಥ್ ಈಗ ಅವರು ಹೋಟೆಲ್ ಉದ್ಯಮದತ್ತ ಹೊರಳಿದ್ದಾರೆ.
ಗೋಪಿನಾಥ್ ಹಾಗೂ ಮತ್ತಿಬ್ಬರು ಉದ್ಯಮಿಗಳು ಜಂಟಿಯಾಗಿ ಮಧ್ಯಮ ದರ್ಜೆಯ ವಾಣಿಜ್ಯ ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ದೇಶಾದ್ಯಂತ ಸ್ಥಾಪಿಸಲಿದ್ದಾರೆ. ಬರುವ ಹತ್ತು ವರ್ಷಗಳಲ್ಲಿ 100ನಗರಗಳಲ್ಲಿ 1000 ವಾಣಿಜ್ಯ ಹೋಟೆಲ್‌ಗಳ ಸರಪಳಿಯನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ. ಪ್ರತಿ ಹೋಟೆಲ್ 125 ಕೊಠಡಿಗಳನ್ನು ಒಳಗೊಂಡಿದ್ದು ರು. 50ಕೋಟಿ ಬಂಡವಾಳ ಹೂಡಲಾಗುತ್ತಿದೆ.
ಹೂಡಿಕೆಯ ಬಹುತೇಕ ಭಾಗವನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಲಾಗುತ್ತಿದೆ. ಅಮೆರಿಕದ ಹೂಡಿಕೆದಾರರಾದ ಮಧು ಕೊನೇಟಿ ಮತ್ತು ಲೀಲಾ ಹೋಟೆಲ್ಸ್‌ನ ಮಾಜಿ ಮಾರುಕಟ್ಟೆ ಮುಖ್ಯಸ್ಥ ಹಾಗೂ ತಂಗೇರಿಯನ್ ಹಾಸ್ಪಿಟಾಲಿಟಿ ಕಂಪನಿ ಮಾಜಿ ಮುಖ್ಯಸ್ಥ ಗಿರೀಶ್ ರಾವ್ ಅವರು ಗೋಪಿನಾಥ್ ಅವರೊಂದಿಗೆ ಕೈಜೋಡಿಸಲಿದ್ದಾರೆ.
(ಏಜೆನ್ಸೀಸ್)












Click it and Unblock the Notifications