ಬಿಎಂಟಿಸಿಯಿಂದ ಆನ್‌ಲೈನಲ್ಲಿ ಟಿಕೆಟ್ ಬುಕಿಂಗ್ ಸೇವೆ
ಬೆಂಗಳೂರು, ಆ.7: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರು ನಗರದ ನಡುವೆ ಸಂಚರಿಸುವ ವಾಯುವಜ್ರ ಬಸ್ಸುಗಳ ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಕಾದಿರಿಸುವ ವ್ಯವಸ್ಥೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಾರಂಭಿಸಿದೆ.
ಬಿಎಂಟಿಸಿ ಆನ್‌ಲೈನ್ ಟಿಕೆಟ್ ಬುಕಿಂಗನ್ನು ರೆಡ್ ಬಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಯಾಣಿಕರು ರೆಡ್ ಬಸ್ತಾಣಕ್ಕೆ ಭೇಟಿ ಕೊಟ್ಟು ಸುಲಭವಾಗಿ ಟಿಕೆಟ್‌ಗಳನ್ನು ಕಾದಿರಿಸಬಹುದು.ಆನ್‌ಲೈನಲ್ಲಿ ಬಸ್ ಸೀಟಿನ ಸಂಖ್ಯೆಯನ್ನೂ ಆಯ್ಕೆ ಮಾಡಿಕೊಳ್ಳುವ ಸದುಪಾಯವನ್ನ್ನು ಬಿಎಂಟಿಸಿ ಕಲ್ಪಿಸಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಮೌಲ್ಯಾಧಾರಿತ ಸೇವೆ ನೀಡಲು ತಾವು ಸಿದ್ಧವಿರುವುದಾಗಿ ರೆಡ್ ಬಸ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಣೀಂದ್ರ ಸಾಮ ತಿಳಿಸಿದರು.
ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ ಏರ್‌ಫೋರ್ಟ್‌ಗೆ ಹೊರಡುವ ಈ ಹವಾನಿಯಂತ್ರಿತ ವೋಲ್ವೊ ಬಸ್ಸುಗಳ ಸೇವೆಯನ್ನು ಬಿಎಂಟಿಸಿ ಇತ್ತೀಚೆಗಷ್ಟೆ ಪ್ರಾರಂಭಿಸಿತ್ತು. ಹೆಚ್ಚಿನ ಲಗೇಜನ್ನು ಇಟ್ಟುಕೊಳ್ಳುವಂತೆ ವಾಯುವಜ್ರ ಬಸ್ಸುಗಳನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿತ್ತು. ಅನಧಿಕಾಲದಲ್ಲೇ ವಾಯುವಜ್ರ ಬಸ್ಸುಗಳು ಪ್ರಯಾಣಿಕರ ಮೆಚ್ಚುಗೆ ಗಳಿಸಿದವು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications