ಐಟಿ ಹೊರಗುತ್ತಿಗೆ : ವಿಪ್ರೋ-ಸ್ಪೆನ್ಸರ್ ಬಹುಕೋಟಿ ಒಪ್ಪಂದ

ಬೆಂಗಳೂರು, ಆ. 4 : ಮಾಹಿತಿ ತಂತ್ರಜ್ಞಾನ ಮತ್ತು ವ್ಯಾಪಾರ ಮಾಹಿತಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಅನ್ಫೋಟೆಕ್ ಸ್ಪೆನ್ಸರ್ಸ್ ರಿಟೇಲ್ ಲಿ. ಕಂಪನಿಗೆ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಸೇವೆ ಒದಗಿಸುವ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.

ಮೂಲಸೌಕರ್ಯ ನಿರ್ವಹಣಾ ಸೇವೆಯನ್ನು 5 ವರ್ಷಗಳವರೆಗೆ ಒದಗಿಸಲು ವಿಪ್ರೋವನ್ನು ಸ್ಪೆನ್ಸರ್ಸ್ ಆಯ್ಕೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ, ಸ್ಪೆನ್ಸರ್ಸ್‌ನ ಎಲ್ಲ ಮಳಿಗೆ, ವಿತರಣಾ ಕೇಂದ್ರ, ಪ್ರಾಂತೀಯ ಮತ್ತು ಜೋನಲ್ ಕಚೇರಿಗಳಿಗೆ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಸೇವೆಯನ್ನು ವಿಪ್ರೋ ಒದಗಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಮುಖ್ಯ ಮಾಹಿತಿ ಅಧಿಕಾರಿ ಅಮಿತ್ ಮುಖರ್ಜಿ, ಒಡಂಬಡಿಕೆಯಿಂದ ಲಾಭಾಂಶದಲ್ಲಿ ಹೆಚ್ಚಳವಾಗುವ ಸಂಶಯವೇ ಇಲ್ಲ ಎಂದರು. ವಿಪ್ರೋ ಇನ್ಫೋಟೆಕ್‌ನ ಮುಖ್ಯ ನಿರ್ವಹಣಾಧಿಕಾರಿ ಆನಂದ್ ಶಂಕರನ್, ರಿಟೇಲ್ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರೀ ಅವಕಾಶಗಳಿವೆ, ಈ ಒಪ್ಪಂದ ಎರಡೂ ಕಂಪನಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

(ಯುಎನ್ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+