ಅಣು ಒಪ್ಪಂದ ಜಪಾನ್ ಮನವೊಲಿಕೆಯತ್ತ ಪ್ರಣಬ್

ಹೊಸದಿಲ್ಲಿ, ಆ. 04 : ಅಂತಾರಾಷ್ಚ್ರೀಯ ಅಣು ಶಕ್ತಿ ಆಯೋಗದ ಸಭೆಯಲ್ಲಿ ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಹಸಿರುನಿಶಾನೆ ದೊರೆತ ಬೆನ್ನಲ್ಲೇ ಅಣು ಶಕ್ತಿ ಸರಬರಾಜು ರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಪಾನ್ ದೇಶದ ಮುಖಂಡರ ಮನವೊಲಿಸಲು ಭಾರತ ತೆರೆಮರೆಯಲ್ಲಿ ಭಾರಿ ಲಾಬಿ ನಡೆಸಿದೆ. ಈ ಕುರಿತು ಭಾರತ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಬೆಳಗ್ಗೆ ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಜಪಾನ್ ವಿದೇಶಾಂಗ ಸಚಿವ ಮಾಸಿಕೋ ಕೌಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.

ಕಳೆದ ಮೂರು ದಶಕಗಳಲ್ಲಿ ಜಪಾನ್ ದೇಶದೊಂದಿಗೆ ಅಂತಹ ಉತ್ತಮ ಸಂಬಂಧ ಹೊಂದಿರದ ಭಾರತ, ಅನಿವಾರ್ಯವಾಗಿ ಮುಂದೆ ತಲೆ ಬಾಗಬೇಕಾಗಿದೆ. ಆ. 21 ರಂದು ನಡೆಯಲಿರುವ ಅಣು ಶಕ್ತಿ ಸರಬರಾಜು ರಾಷ್ಟ್ರಗಳ ಸಭೆಯಲ್ಲಿ ಭಾರತ ಮತ್ತು ಅಮೆರಿಕ ಒಪ್ಪಂದ ವಿಷಯ ಚರ್ಚೆಗೆ ಬರಲಿದೆ. ಆಗ ಭಾರತದ ಪರ ನಿಲ್ಲುವಂತೆ ಜಪಾನ್ ವಿದೇಶಾಂಗ ಸಚಿವ ಮಾಸಿಕೋ ಕೌಮಾರ್ ಅವರಿಗೆ ಪ್ರಣಬ್ ಮುಖರ್ಜಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗದ ಸಭೆಯಲ್ಲಿ ಭಾರತ ಮತ್ತು ಅಮೆರಿಕ ಅಣು ಶಕ್ತಿ ಒಪ್ಪಂದಕ್ಕೆ ಹಸಿರು ನಿಶಾನೆ ದೊರಕಿರುವ ಹಿನ್ನೆಲೆಯಲ್ಲಿ ಅಣು ಸರಬರಾಜು ರಾಷ್ಟ್ರಗಳು ಭಾರತಕ್ಕೆ ಆಗಮಿಸಿ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಆ. 21ರಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದೆ. ಭಾರತ-ಜಪಾನ್ ಅನೇಕ ವರ್ಷಗಳಿಂದ ಉತ್ತಮ ಬಾಂಧವ್ಯಕ್ಕಾಗಿ, ಮಾಸಿಕೋ ಕೌಮಾರ್ ಅವರೊಂದಿಗೆ ದ್ವಿರಾಷ್ಟ್ರಗಳ ಮಾತುಕತೆ ನಡೆಸಲಾಗುವುದು ಎಂದು ಮುಖರ್ಜಿ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ಅಣು ಒಪ್ಪಂದ: ಐಎಇಎ ಮಹತ್ವದ ಸಭೆ ಜಾರಿ
ಭಾರತ ಅಣು ರಾಷ್ಟ್ರವಾಗುವುದು ನಿಶ್ಚಿತ: ಪ್ರಣಬ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+