ಹಳಿ ತಪ್ಪಿದ ಮಂಗಳೂರಿನ ಗೂಡ್ಸ್ ರೈಲು
ಮಂಗಳೂರು, ಜು. 31 : ಸಮೀಪದ ಕಲ್ಲಡ್ಕ ಬಳಿ ಗೂಡ್ಸ್ ರೈಲಿನ ಹಳಿ ತಪ್ಪಿದ ಘಟನೆ ಜರುಗಿದೆ. ಗೂಡ್ಸ್ ರೈಲಿನ ಹತ್ತು ಹಳಿಗಳು ತಪ್ಪಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ರೈಲಿನ 8 ಬೋಗಿಗಳು ಹಳಿ ತಪ್ಪಿದ ಪರಿಣಾಮವಾಗಿ 12 ಗಂಟೆಗಳ ಕಾಲ ರೈಲ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಲ್ಲಿದ್ದಲು ಹೊತ್ತಿದ್ದ ರೈಲು ಕಲ್ಲಡ್ಕದ ಕಬಕಪುತ್ತೂರು ಹಾಗೂ ಬಂಟ್ವಾಳ ಹತ್ತಿರ ಹಳಿ ತಪ್ಪಿದೆ. ಸಿಬ್ಬಂದಿಯ ಆಚಾತುರ್ಯದಿಂದ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಸುಬ್ರಮಣ್ಯ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ದುರ್ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ತಪ್ಪಿದ್ದರಿಂದ ಹಳಿ ಸಂಚಾರಕ್ಕೆ ಅನುಕೂಲವಾಗಿಲ್ಲ. ಹಳಿ ದುರಸ್ತಿ ನಂತರ ಸಂಚಾರಕ್ಕೆ ಚಾಲನೆ ಸಿಗಬಹುದು. ದುರಸ್ತಿ ಕಾರ್ಯ ಸುಮಾರು 12 ಗಂಟೆ ಬೇಕಾಗಬಹುದು ಎನ್ನಲಾಗಿದೆ. ಮೈಸೂರು ಮತ್ತು ಮಂಗಳೂರಿಗೆ ತೆರಳುವ ರೈಲು ಮಾರ್ಗಗಳಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಪ್ರಯಾಣಿಕರು ಬಸ್ ಮೂಲಕ ಪ್ರಯಾಣ ಬೆಳಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications