ಸ್ಪೀಕರ್ ಆಗಿ ಚಟರ್ಜಿ ಮುಂದುವರಿಕೆ : ಯುಪಿಎ

ನವದೆಹಲಿ, ಜು. 24 : ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಪಿಐ(ಎಂ) ಪಕ್ಷದಿಂದ ಉಚ್ಛಾಟಿತಗೊಂಡಿರುವ ಹಿರಿಯ ಸಂಸದೀಯ ಪಟು ಸೋಮನಾಥ್ ಚಟರ್ಜಿ ಅವರನ್ನೇ ಲೋಕಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಯುಪಿಎ ಸರ್ಕಾರ ನಿರ್ಧರಿಸಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ರಾಂ ವಿಲಾಸ್ ಪಾಸ್ವಾನ ಗುರುವಾರ ಬೆಳಗ್ಗೆ ಸೋಮನಾಥ್ ಚಟರ್ಜಿ ಅವರ ನಿವಾಸಕ್ಕೆ ತೆರಳಿ 10 ನಿಮಿಷದ ಮಾತುಕತೆಯ ನಂತರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸೋಮನಾಥ್ ಚಟರ್ಜಿ ಅವರನ್ನು ಲೋಕಸಭಾಧ್ಯಕ್ಷ ಸ್ಥಾನದಲ್ಲಿಯೇ ಮುಂದುವರೆಸುವುದಾಗಿ ಅವರು ಸ್ಪಷ್ಟಪಡಿಸಿದರು. ಜತೆಗೆ ಮುಂದಿನ ತಿಂಗಳ ಕಾಮನ್ ವೆಲ್ತ್ ಸ್ಪೀಕರ್ ಸಮ್ಮೇಳನದಲ್ಲಿ ಸೋಮನಾಥ್ ಚಟರ್ಜಿ ಭಾಗವಹಿಸಲಿದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದರು.

ಅಣು ಬಿಕ್ಕಟ್ಟಿನ ಹಿನ್ನಲೆಯಲ್ಲಿ ಯುಪಿಎ ಕ್ರಮವನ್ನು ವಿರೋಧಿಸಿ ಎಡಪಕ್ಷದ ಮುಖಂಡರು ಬೆಂಬಲವನ್ನು ಹಿಂತೆಗೆದುಕೊಂಡಿದ್ದರು. ಆಗ ಸರ್ಕಾರ ಅಲ್ಪ ಮತಕ್ಕೆ ಕುಸಿಯಿತು. ವಿರೋಧ ಪಕ್ಷಗಳ ಒತ್ತಾಯದ ಮೇಲೆ ರಾಷ್ಟ್ರಪತಿಯವರು ಯುಪಿಎ ಸರ್ಕಾರಕ್ಕೆ ಸಂಸತ್ತಿನಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ಸೂಚಿಸಿದರು. ಆಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜು. 22 ರಂದು ವಿಶ್ವಾಸಮತ ಸಾಬೀತುಪಡಿಸುವ ದಿನಾಂಕ ನಿಗದಿ ಮಾಡಿದರು. ಸಿಪಿಐ(ಎಂ) ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡರೂ ಸೋಮನಾಥ್ ಚಟರ್ಜಿ ಲೋಕಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ವಿಪ್ ಉಲ್ಲಂಘಿಸುವುದರ ಜತೆಗೆ ಹಾಗೂ ಪಕ್ಷದ ಸಂವಿಧಾನಕ್ಕೆ ದಕ್ಕೆ ಬರುವ ಹಾಗೆ ಚಟರ್ಜಿ ನಡೆದುಕೊಂಡಿದ್ದಾರೆ ಎಂದು ಅವರನ್ನು ಬುಧವಾರ ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ಪಕ್ಷದಿಂದ ಉಚ್ಛಾಟಿಸಿರುವ ಕುರಿತು ಪ್ರತಿಕ್ರಿಯಿಸಲು ಚಟರ್ಜಿ ನಿರಾಕರಿಸಿದ್ದಾರೆ. ಆ ಮಧ್ಯೆ ಯುಪಿಎ ಸರ್ಕಾರದ ಪ್ರಮುಖ ಮುಖಂಡರು ಚಟರ್ಜಿ ನಿವಾಸಕ್ಕೆ ಭೇಟಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಜತೆಗೆ ಲೋಕಸಭಾಧ್ಯಕ್ಷರಾಗಿ ಮುಂದುವರೆಯಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ. 1996ರಲ್ಲಿ ಸೋಮನಾಥ್ ಚಟರ್ಜಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಪಡೆದಿದ್ದಾರೆ. 40 ವರ್ಷಗಳ ಕಾಲ ಉತ್ತಮ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್‌ಪಾಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+