ಇಂಡೋ ಯುಎಸ್ ಅಣುಬಂಧಕ್ಕೆ ಪಾಕ್ ವಿರೋಧ
ವಿಯನ್ನಾ, ಜು. 24 : ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದದಿಂದ ಭಾರತ ಶಕ್ತಿಶಾಲಿ ರಾಷ್ಟ್ರವಾಗಲಿದೆ. ಪರಮಾಣು ಒಪ್ಪಂದದ ಮೂಲಕ ಇಂಧನವನ್ನು ಅಣ್ವಸ್ತ್ರ ತಯಾರಿಕೆಗೆ ಬಳಸಿಕೊಂಡಲ್ಲಿ ಪಕ್ಕದ ದೇಶದೊಂದಿಗೆ ಮತ್ತಷ್ಟು ಹಗೆತನ ಸಾಧಿಸುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ ಆತಂಕ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಈ ಕಳೆದ ಜು. 18 ರಂದು ಪಾಕಿಸ್ತಾನ ಸ್ವವಿಳಾಸ ಹೊಂದಿರುವ ಈ ಪತ್ರ ಜಗತ್ತಿನ ಸುಮಾರು 60 ದೇಶಗಳಿಗೆ ತಲುಪಿರುವ ಸುದ್ದಿ ವರದಿಯಾಗಿದೆ. ಮುಖ್ಯವಾಗಿ ಐಎಇಎ ಸಂಸ್ಥೆ, ಇಂಧನ ಸರಬರಾಜು ರಾಷ್ಟ್ರಗಳ ಸದಸ್ಯರಿಗೆ ಈ ಪತ್ರವನ್ನು ರವಾನಿಸಲಾಗಿದೆ. ಪತ್ರದ ಮುಖ್ಯ ಸಾರವೆನೆಂದರೆ, ಭಾರತ ಪರಮಾಣು ಒಪ್ಪಂದದ ನಂತರ ಅಪಾರ ಪ್ರಮಾಣದಲ್ಲಿ ಇಂಧನ ಪೂರೈಕೆಯಾಗಲಿದೆ. ಇದನ್ನು ಒಳತಿಗಾಗಿ ಬಳಸಿಕೊಳ್ಳದೇ, ಅಣ್ವಸ್ತ್ರ ತಯಾರಿಕೆಗಾಗಿ ಬಳಸಿ ವೈರಿ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಮುಂಚೆ ಅದರ ಸಂಪೂರ್ಣ ಸಾಧಕ ಬಾಧಕಗಳ ಬಗ್ಗೆ ಕೂಲಂಕಷ ಚರ್ಚೆಯ ನಡೆಸಿ ನಂತರ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂಧನ ಸರಬರಾಜು ರಾಷ್ಟ್ರಗಳು ಭಾರತ ಮತ್ತು ಅಮೆರಿಕ ದೇಶಗಳ ಅಣು ಒಪ್ಪಂದ ಸುರಕ್ಷತಾ ಪತ್ರಕ್ಕೆ ಸಹಿ ಹಾಕುವ ಕೆಲಸಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಈ ಪತ್ರದ ಸುದ್ದಿ ತೀವ್ರ ಕುತೂಹಲ ಉಂಟುಮಾಡಿದೆ. ಸುರಕ್ಷತಾ ಒಪ್ಪಂದದ ಬಗ್ಗೆ ಐಎಇಎ ಆ.1 ರಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.
(ಏಜೆನ್ಸಿಸ್)
ಯುಎಸ್ ನಲ್ಲಿ ಪರಮಾಣು ಒಪ್ಪಂದಕ್ಕೆ ಭರ್ಜರಿ ಸಿದ್ಧತೆ
ವಿಶ್ವಾಸ ಮತ : ಯುಪಿಎಗೆ ನಿಚ್ಚಳ ಗೆಲುವು












Click it and Unblock the Notifications