ಬ್ಲಾಗ್ ಲೋಕದ ಹಿರಿಯ ಜೀವಿ ರಿಲೇ ಅಸ್ತಂಗತ

R I P Olive Rileyಸಿಡ್ನಿ, ಜುಲೈ 15: ಜಗತ್ತಿನ ಅತ್ಯಂತ ಇಳಿವಯಸ್ಸಿನ ಬ್ಲಾಗ್ ಲೇಖಕಿ, 108 ವರ್ಷದ ಓಲಿವ್ ರಿಲೇ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಭಾನುವಾರ ನ್ಯೂ ಸೌಥ್ ವೇಲ್ಸ್ ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಇವರ ಮರಿಮೊಮ್ಮಗ ಡರೇನ್ ಸ್ಟೋನ್ ಹೇಳಿದ್ದಾರೆ.

ಅಮೆರಿಕ, ರಷ್ಯ ಸೇರಿದಂತೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ರಿಲೇ ಅವರು ತಮ್ಮ ಬ್ಲಾಗ್ ನಲ್ಲಿ 70 ಕ್ಕೂ ಅಧಿಕ ಲೇಖನಗಳನ್ನು ಹಾಕಿದ್ದಾರೆ. ದಿನನಿತ್ಯದ ಹಾಗು ಹೋಗುಗಳನ್ನು ಲೇಖನಗಳನ್ನು ಫೆಬ್ರವರಿ 2007 ರಿಂದ ವೆಬ್ ಪುಟಗಳಿಗೆ ಹಾಕಲು ಪ್ರಾರಂಭಿಸಿದ ಮುತ್ತಜ್ಜಿ, ಜೂನ್ 26 ರಂದು ಬರೆದಿದ್ದು ಕೊನೆಯ ಲೇಖನವಾಯ್ತು. ಅದರಲ್ಲಿ ಕಡೆ ದಿನಗಳನ್ನು ಖಾಯಿಲೆಯಿಂದ ಕಳೆಯುವುದು ಬೇಸರವಾಗಿದೆ. ಆದರೂ ನರ್ಸಿಂಗ್ ಹೋಮ್ ನ ನರ್ಸ್ ಗಳ ಜತೆ ಸಂತೋಷ ಹಾಡು ಹಾಡಿದ್ದು ಖುಷಿಕೊಟ್ಟ ವಿಷಯ ಎಂದು ಬ್ಲಾಗಿಸಿದ್ದರು .

1899 ರ ಅಕ್ಟೋಬರ್ 20 ರಂದು ಜನಿಸಿದ ರಿಲೇ , ಬಾರ್ ಮೇಡ್ ಆಗಿ, ಅಡುಗೆ ಕೆಲಸಮಾಡಿಕೊಂಡು ಮೂವರು ಮಕ್ಕಳನ್ನು ಸಾಕಿದ್ದರು. ಎರಡು ಮಹಾಯುದ್ಧಗಳನ್ನು ಕಂಡ ನೆನಪು ಇನ್ನೂ ಉಳಿಸಿಕೊಂಡಿದ್ದರು. ಇಳಿವಯಸ್ಸಿನಲ್ಲೂ ಜೀವನ ಉತ್ಸಾಹ ಉಳಿಸಿಕೊಂಡಿದ್ದ ರಿಲೇ ಅವರು ಎಷ್ಟೋ ಜನಕ್ಕೆ ಮಾದರಿಯಾಗಬಲ್ಲರು.
(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+