ಅಸಿಫ್ ಹೆಸರು ಬಹಿರಂಗ : ವಾಡಾದಿಂದ ಬಿಸಿಸಿಐ ತರಾಟೆ
ನವದೆಹಲಿ, ಜು. 15 : ಉದ್ದೀಪನಾ ಮದ್ದು ಸೇವನೆ ಆರೋಪ ಹೊತ್ತಿರುವ ಪಾಕಿ ಕ್ರಿಕೆಟಿಗ ಮೊಹಮ್ಮದ್ ಅಸಿಫ್ ಹೆಸರನ್ನು ಬಿ ಸ್ಯಾಂಪಲ್ ಪರೀಕ್ಷೆ ನಡೆಸುವ ಮೊದಲೇ ಬಹಿರಂಗಪಡಿಸಿದ್ದಕ್ಕೆ ಅಂತಾರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (WADA) ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದೆ.
ವಾಡಾ ನಿಯಮಗಳ ಪ್ರಕಾರ ಬಿ ಸ್ಯಾಂಪಲ್ ಪರೀಕ್ಷೆ ನಡೆಸುವ ಮೊದಲು ಆಟಗಾರನ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಮೊದಲ ವರದಿ ಬರುತ್ತಿದ್ದಂತೆ ಕಳಂಕಿತ ಆಟಗಾರನನ್ನು ಬಿ ಸ್ಯಾಂಪಲ್ ಪರೀಕ್ಷೆಗೆ ಸಿದ್ಧನಿದ್ದಾನೆಯೆ ಎಂದು ಕೇಳಬೇಕು. ಆದರೆ ಬಿಸಿಸಿಐ ಇದಾವುದನ್ನೂ ಮಾಡಿಲ್ಲ ಎಂಬುದು ವಾಡಾದ ಆರೋಪ.
ಬಿಸಿಸಿಐ ಈ ಆರೋಪವನ್ನು ತಳ್ಳಿಹಾಕಿದ್ದು, ಮೊಹಮ್ಮದ್ ಅಸಿಫ್ ಹೆಸರನ್ನು ಬಹಿರಂಗಪಡಿಸಿರುವುದು ಸರಿಯಾಗೇ ಇದೆ ಎಂದು ವಾದಿಸಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಅಸಿಫ್ ಔಟ್ : ಐಪಿಎಲ್ ಪಂದ್ಯದ ವೇಳೆಯಲ್ಲಿ ನಿಷೇಧಿತ ಡ್ರಗ್ಸ್ ಸೇವಿಸಿದ ಆರೋಪ ಹೊತ್ತಿರುವ ಅಸಿಫ್‌ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದು, ಸೆಪ್ಟೆಂಬರ್ 11ರಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಹಾಕಿದೆ.
ಹೊಸ ವಿವಾದದಿಂದ ನಮಗೆ ತುಂಬಾ ಬೇಜಾರಾಗಿದೆ. ಕಳಂಕಿತ ಆಟಗಾರನನ್ನು ಪಾಕಿಸ್ತಾನ ಯಾವ ರೀತಿಯಲ್ಲೂ ಬೆಂಬಲಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಓ ಶಫ್ಕತ್ ನಗ್ಮಿ ಖಾರವಾಗಿ ನುಡಿದಿದ್ದಾರೆ.
(ಏಜೆನ್ಸೀಸ್)
ಪೂರಕ ಓದಿಗೆ
ಐಪಿಎಲ್ : ಅಸಿಫ್ ಉದ್ದೀಪನ ಮದ್ದು ಸೇವನೆ












Click it and Unblock the Notifications