ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ ಜೂನ್ 2008ರ ಫಲಿತಾಂಶ ಪ್ರಕಟ

By Staff
|
Google Oneindia Kannada News

Karnataka SSLC Supplementary Results 2008ಬೆಂಗಳೂರು, ಜೂ.28 : ಎಸ್ಎಸ್ಎಲ್ ಸಿ 2008ರ ಪೂರಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಪ್ರೌಢ ಶಾಲೆ ಹಾಗೂ ಕಿರಿಯ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲು ವ್ಯವಸ್ಥೆ ಮಾಡಲಾಗಿದೆ.

ವೆಬ್ ಸೈಟ್ ಗಳಲ್ಲೂ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಡಿ.ಎಸ್.ರಾಜಣ್ಣ ತಿಳಿಸಿದ್ದಾರೆ. ಬೆಂಗಳೂರು ನಗರದಿಂದ 1255225 ದೂರವಾಣಿ ಸಂಖ್ಯೆಗೆ ಅಥವಾ ಹೊರ ಊರುಗಳಿಂದ 9580-1255225 ಕರೆ ಮಾಡಿ ಫಲಿತಾಂಶ ಪಡೆಯಬಹುದು. ಇಲ್ಲವೇ ಬಿಎಸ್ಎನ್ಎಲ್ ಮೋಬೈಲ್ ಚಂದಾದಾರರಾಗಿದ್ದರೆ 12506 ಅಥವಾ ಸ್ಥಿರ ದೂರವಾಣಿಯಿಂದ 12555 ಮತ್ತು 125560 ಕರೆ ಮಾಡಿ ಫಳಿತಾಂಶ ತಿಳಿದುಕೊಳ್ಳಬಹುದು.

ಪೂರಕ ಪರೀಕ್ಷೆಯಲ್ಲಿ ಹಾಜರಾದ ಒಟ್ಟು 2,48,984 ವಿದ್ಯಾರ್ಥಿಗಳಲ್ಲಿ 1,30,163 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾವಾರು ಫಲಿತಾಂಶ ಶೇ.47.72 ರಷ್ಟಾಗಿದೆ. ಈ ಪರೀಕ್ಷೆಯಲ್ಲೂ ಕೂಡಾ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. ಜತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ ಎಂದು ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Karnataka SSLC Supplementary Results 2008

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X