ಅದಿತ್ಯಾ ಬಿರ್ಲಾ ಐಡಿಯಾ ಇನ್ಮುಂದೆ ಸ್ವಲ್ಪ ಸ್ಪೈಸಿ
ನವದೆಹಲಿ, ಜೂ. 26:ಅದಿತ್ಯಾ ಬಿರ್ಲಾ ಸಮೂಹ ಒಡೆತನದ ಐಡಿಯಾ ಸೆಲ್ಯುಲರ್ ಸಂಸ್ಥೆ ಸ್ಪೈಸ್ ಟೆಲಿಕಾಂನ ಶೇ. 40.8ರಷ್ಟು ಪಾಲು ಖರೀದಿಸಲಿದೆ. ಇದಕ್ಕಾಗಿ 2,716ಕೋಟಿ ರು ವೆಚ್ಚಮಾಡಲಿದೆ.
ಆದಿತ್ಯಾ ಬಿರ್ಲಾ ಸಂಸ್ಥೆಗೆ ಸೇರಿದ 'ಐಡಿಯಾ' ದೇಶದಲ್ಲಿ ಐದನೇ ಅತಿ ಹೆಚ್ಚು ಚಂದಾದಾರನ್ನು ಹೊಂದಿರುವ ಮೊಬೈಲ್ ಸಂಸ್ಥೆ ಎನಿಸಿದೆ.ಸ್ಪೈಸ್ ನ ಪ್ರತಿ ಷೇರಿಗೆ 77.30 ರು ನೀಡಲು ಐಡಿಯಾ ಮುಂದಾಗಿದು, ಇದರೊಂಡಿಗೆ ಮಾರುಕಟ್ಟೆ ಪಲು ಶೇ. 11.1 ರಷ್ಟು ವಿಸ್ತರಿಸಲಿದೆ.
44 ಲಕ್ಷ ಚಂದಾದಾರರನ್ನು ಹೊಂದಿರುವ ಸ್ಪೈಸ್ , ಕರ್ನಾಟಕ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ, ಆಂಧ್ರಪ್ರದೇಶ, ತಮಿಳುನಾಡು ಮತ್ತು ದೆಹಲಿ ಸೇರಿದಂತೆ ನಾಲ್ಕು ವೃತ್ತಗಳಲ್ಲಿ ಸೇವೆ ವಿಸ್ತರಿಸಲು ಸ್ಪೈಸ್ ಟೆಲಿಕಾಂಗೆ ಅನುಮತಿ ದೊರೆತಿದೆ. ಸುಮಾರು 6.44 ಕೋಟಿ ಚಂದಾದಾರರೊಂದಿಗೆ ಭಾರ್ತಿ ಟೆಲಿಕಾಂನ ಏರ್ ಟೆಲ್ ಅಗ್ರಸ್ಥಾನ ಕಾಯ್ದುಕೊಂಡಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications