ಸಾಫ್ಟ್‌ವೇರ್ ರಫ್ತಿನಲ್ಲಿ ಬೆಂಗಳೂರು ಈಗಲೂ ಅಗ್ರಜ

ಬೆಂಗಳೂರು, ಜೂ. 26 : ಭಾರತ ಮತ್ತು ಅಮೆರಿಕದ ಆರ್ಥಿಕ ಸ್ಥಿತಿಯಲ್ಲಾಗುತ್ತಿರುವ ಏರುಪೇರುಗಳು ಬೆಂಗಳೂರಿನ ತಂತ್ರಾಂಶ ರಫ್ತಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.

ಸಾಫ್ಟ್‌ವೇರ್ ವ್ಯವಸಾಯ ಮಾಡುತ್ತಿರುವ ಅನೇಕ ಕಂಪನಿಗಳಿಗೆ ಡಾಲರ್ ಬಿಸಿ ಮುಟ್ಟಿದ್ದರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯಕ್ಕೆ ಬೆಂಗಳೂರೇ ರಾಷ್ಟ್ರದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. ಪ್ರಸಕ್ತ ಹಣಕಾಸಿನ ವರ್ಷದಲ್ಲಿ 13.5 ಬಿಲಿಯನ್ ಡಾಲರ್ ವಹಿವಾಟನ್ನು ಸಾಧಿಸುವ ಹಾದಿಯಲ್ಲಿದೆ.

ಈ ಕುರಿತು ಆಶಾಭಾವನೆ ವ್ಯಕ್ತಪಡಿಸಿರುವ ಕರ್ನಾಟಕದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿಯಾಗಿರುವ ಅಶೋಕ ಕುಮಾರ್ ಸಿ. ಮನೋಳಿ ಅವರು, ಇನ್ನೆರಡು ವರ್ಷಗಳಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ರಫ್ತು 60 ಬಿಲಿಯನ್ ಡಾಲರ್ ಮುಟ್ಟಲಿದೆ ಎಂದಿದ್ದಾರೆ.

ರಾಜ್ಯದ ಐಟಿ, ಬಿಟಿ ನೀತಿಯನ್ನು ಪರಿಶೀಲಿಸಲು ಇನ್ಫೋಸಿಸ್ ಚೇರ್ಮನ್ ಮತ್ತು ಮೆಂಟರ್ ಎನ್.ಆರ್. ನಾರಾಯಣ ಮೂರ್ತಿ ಮತ್ತು ಬಯೋಕಾನ್‌ನ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ರಚಿಸಲಾಗಿದೆ ಎಂದು ಮನೋಳಿ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡದಿದ್ದರೆ ಪುಣೆ ಸದ್ಯದಲ್ಲಿಯೇ ಬೆಂಗಳೂರನ್ನು ಹಿಂದಿಕ್ಕಲಿದೆ ಎಂದು ನಾರಾಯಣ ಮೂರ್ತಿಯವರು ಇತ್ತೀಚೆಗೆ ಹೇಳಿರುವುದು ಸಾಫ್ಟ್‌ವೇರ್ ಉದ್ಯಮಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸಿದಂತಾಗಿದೆ. ಬೆಂಗಳೂರಿನಲ್ಲಿ 2000ಕ್ಕೂ ಹೆಚ್ಚಿನ ಸಾಫ್ಟ್‌ವೇರ್ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳೊಂದಿಗೆ, 248 ಬಿಪಿಓ ಮತ್ತು 183 ಬಯೋ ಟೆಕ್ನಾಲಜಿ ಕಂಪನಿಗಳು ಬೆಂಗಳೂರನ್ನು ಅಭಿವೃದ್ಧಿ ಕ್ಷೇತ್ರದಲ್ಲಿ ಮುನ್ನಡೆಸಲು ಕೈಜೋಡಿಸಿವೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+