ಪದ್ಮಪ್ರಿಯ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವುದಿಲ್ಲ
ಬೆಂಗಳೂರು, ಜೂ.18: ಪದ್ಮಪ್ರಿಯ ಸಾವಿನ ಪ್ರಕರಣವನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚ್ಚಿ ಹಾಕುವುದಿಲ್ಲ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ಇಂದು ತಿಳಿಸಿದರು.
ಈ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಹೇಳಿಕೆಗಳಲ್ಲಿ ಪರಸ್ಪರ ಗೊಂದಲ ಇದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಆಯಾ ಸಂದರ್ಭದಲ್ಲಿ ಬಂದ ಮಾಹಿತಿಗಳನ್ನು ಆಧರಿಸಿ ಈ ಪ್ರತಿಕ್ರಿಯೆ ನೀಡಲಾಗಿದೆ ಎಂದಷ್ಟೇ ತಿಳಿಸಿದರು.
ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲಾಗುವುದಿಲ್ಲ. ಪ್ರಕರಣದ ಹೊಣೆಯನ್ನು ಯಾರ ಮೇಲೂ ಹೊರಿಸಲು ಸಾಧ್ಯವಿಲ್ಲ. ಪದ್ಮಪ್ರಿಯಾ ಸ್ನೇಹಿತ ಅತುಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ:
ಸಾವಿನಲ್ಲಿ ನೋವು ನೀಗಿಕೊಂಡ ಪದ್ಮಪ್ರಿಯಗೆ ವಿದಾಯ
ಸೂಕ್ಷ್ಮ ಮನಸ್ಸಿನ ಪದ್ಮಪ್ರಿಯಾ ಸಾವಿನ ಕಾರಣವೇನು?
ಮುಗಿದ ಪದ್ಮಪ್ರಿಯಾ ಮರಣೋತ್ತರ ಪರೀಕ್ಷೆ
ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಆಚಾರ್ಯ
ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು
ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ
ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್


Click it and Unblock the Notifications
