ಮೈಸೂರಿನಲ್ಲಿ 20 ಸಾವಿರ ನಕಲಿ ಸಿಡಿಗಳ ವಶ

ಮೈಸೂರು, ಜೂ. 17: ನಗರದ ಹಲವೆಡೆಗಳಲ್ಲಿ ಸುಮಾರು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದ ನಕಲಿ ಸಿಡಿ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕಾರಿಗಳು ಹಾಗೂ ಪೊಲೀಸರು ತಂಡ ರಚಿಸಿಕೊಂಡು,ನಗರದ ಸಂಗಮ್, ಲಕ್ಷ್ಮಿ ಚಿತ್ರಮಂದಿರ ಹಾಗೂ ಅರಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿನಡೆಸಿದರು. ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಸುಮಾರು 20 ಸಾವಿರ ನಕಲಿ ಸಿಡಿಗಳನ್ನು ವಶಪಡಿಸಿಕೊಳ್ಳಲಾಯಿತು. ಸುಮಾರು 70 ಕ್ಕೂ ಅಧಿಕ ತಳ್ಳು ಗಾಡಿಗಳಲ್ಲಿ ಸಿಡಿಗಳನ್ನು ಮಾರಾಟಮಾಡಲಾಗುತ್ತಿತ್ತು. ಈ ಸಂಬಂಧವಾಗಿ ನಾಲ್ವರನ್ನು ಬಂಧಿಸಲಾಗಿದೆ ಉಳಿದವರನ್ನು ಹುಡುಕಲಾಗುತ್ತಿದೆ. ವಶಪಡಿಸಿಕೊಂಡ ಸಿಡಿಗಳನ್ನು ಲಷ್ಕರ್ ಠಾಣೆ ಹಾಗೂ ದೇವರಾಜಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಎಂದು ದೇವರಾಜ ಠಾಣಾಧಿಕಾರಿ ತಿಳಿಸಿದರು.

ಹೊಸ ಚಿತ್ರಗಳಿಗೆ ಬೇಡಿಕೆ:
ಇಂದ್ರ ,ಗಜ, ಸತ್ಯ ಇನ್ ಲವ್, ಅರಮನೆ, ಗಾಳಿಪಟ ಚಿತ್ರಗಳ ಸಿಡಿಗಳು ಸೇರಿದಂತೆ ಹಲವಾರು ಜನಪ್ರಿಯ ಗೀತೆಗಳ ವಿಸಿಡಿಗಳು, ಡಿವಿಡಿಗಳು ಅಗ್ಗದ ಬೆಲೆಗೆ ಬಿಕರಿಯಾಗುತ್ತಿದ್ದವು.ಈ ಜಾಲ ಹಲವಾರು ವರ್ಷಗಳಿಂದ ನಡೆಯುತ್ತಿದ್ದರೂ, ಬಹಿರಂಗವಾಗಿ ಮಾರಾಟ ಮಾಡಲು ಹೆದರುತ್ತಿದ್ದರು, ಬೆಂಗಳೂರು ಬಿಟ್ಟರೆ ,ಮೈಸೂರಿನಲ್ಲಿ ನಕಲಿ ಸಿಡಿಜಾಲ ಅಧಿಕವಾಗಿದೆ ಎನ್ನಲಾಗಿದೆ.

(ದಟ್ಸ್ ಕನ್ನಡವಾರ್ತೆ)

ನಕಲಿ ಸಿಡಿಜಾಲದಲ್ಲಿ ಗಣೇಶ್ ಚಿತ್ರಗಳಿಗೆ ಡಿಮ್ಯಾಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+