ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಟ್ಟಬಟ್ಟೆ ತೂರಿ ನೋಡುವ ಕ್ಯಾಮೆರಾದ ಸಂಶೋಧನೆ

By Staff
|
Google Oneindia Kannada News

ಲಂಡನ್, ಮಾ.10 : ಕ್ಷಕಿರಣಗಳಂತೆ ತೂರಿಹೋಗಿ ಜನ ಧರಿಸಿರುವ ಬಟ್ಟೆಯ ಹಿಂದೇನಿದೆ ಎಂಬುದನ್ನು ಕಂಡುಹಿಡಿಯಬಲ್ಲ ಕ್ಯಾಮೆರಾ ಸಂಶೋಧಿಸಿರುವುದಾಗಿ ಆಕ್ಸಫೋರ್ಡ್‌ಶೈರ್‌ನ ಕಂಪನಿ ಹೇಳಿಕೊಂಡಿದೆ.

ಆದರೆ ಇದರಿಂದ ಜನಸಾಮಾನ್ಯರು ಆಂತಕಗೊಳ್ಳುವ ಅಗತ್ಯವಿಲ್ಲ. ಭಯೋತ್ಪಾದನೆಯನ್ನು ಮಟ್ಟಹಾಕುವ ಉದ್ದೇಶದಿಂದ ಕಂಡುಹಿಡಿಯಲಾಗಿರುವ ‌ಟಿ5000 ಎನ್ನುವ ಈ ಕ್ಯಾಮೆರಾ ಶಂಕಿತ ವ್ಯಕ್ತಿಯನ್ನು 80 ಅಡಿ ದೂರದಿಂದಲೇ ಪರಿಶೋಧಿಸಿ ಬಟ್ಟೆಯಲ್ಲಿ ಹುದುಗಿಸಿಟ್ಟಿರುವ ಶಸ್ತ್ರಾಸ್ತ್ರ, ಮಾದಕ ವಸ್ತುಗಳು ಮತ್ತು ಸ್ಫೋಟಕಗಳನ್ನು ಪತ್ತೆಹಚ್ಚುತ್ತದೆ.

ಥ್ರೂವಿಷನ್ ಎಂಬ ಕಂಪನಿ ಸಂಶೋಧಿಸಿರುವ ಈ ವಿಶಿಷ್ಟ ಕ್ಯಾಮೆರಾ ಬಟ್ಟೆಗಳ ಹಿಂದಿರುವ ವಸ್ತುಗಳನ್ನು ಮಾತ್ರ ಪತ್ತೆಹಚ್ಚುತ್ತದೆಯೇ ಹೊರತು ವ್ಯಕ್ತಿಯ ದೇಹದ ಭಾಗಗಳ ವಿವರಗಳನ್ನು ನೀಡುವುದಿಲ್ಲ ಎಂದು 'ದಿ ಸಂಡೇ ಟೈಮ್ಸ್' ವರದಿ ಮಾಡಿದೆ. ಬ್ರಿಟಿಷ್ ಸರ್ಕಾರದ ಅಧೀನದಲ್ಲಿರುವ ಭೌತಶಾಸ್ತ್ರ ಸಂಶೋಧನಾ ಕೇಂದ್ರದ ಭಾಗವಾಗಿರುವ ರುದರ್‌ಫೋರ್ಡ್ ಆಪಲ್‌ಟನ್ ಲ್ಯಾಬೊರೇಟರಿಯಲ್ಲಿ ಈ ಸಂಶೋಧನೆ ನಡೆದಿದೆ.

ಈ ಕ್ಯಾಮೆರಾವನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ, ಅಂಗಡಿ ಮಳಿಗೆಗಳಲ್ಲಿ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ಇಡಬಹುದಾಗಿದೆ. ಇದನ್ನು ಕೊಳ್ಳುವುದಕ್ಕಾಗಿ ಪೊಲೀಸ್ ಇಲಾಖೆ, ರೈಲು ನಿರ್ಮಾಣ ಕಂಪನಿಗಳು, ವಿಮಾನಯಾನ ಸಂಸ್ಥೆಗಳು ಆಸಕ್ತಿ ತೋರಿವೆ.

ದಟ್ಟಮೋಡಗಳನ್ನು ಭೇದಿಸಿ ಭಯೋತ್ಪಾದನಾ ವಿಮಾನಗಳನ್ನು ಪತ್ತೆಹಚ್ಚುವ ಮೂಲಉದ್ದೇಶದಿಂದ ಇದನ್ನು ತಯಾರಿಸಲಾಗಿತ್ತು. ಆದರೆ, ಇದು ಬಟ್ಟೆಯ ಮುಖಾಂತರವೂ ನೋಡುವ ಸಾಮರ್ಥ್ಯವಿರುವುದರಿಂದ ಬಹುಪಯೋಗಿ ಕ್ಯಾಮೆರಾ ಆಗಿ ಪರಿವರ್ತಿತವಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X