ಮಹಾತ್ಮನ ಕುರಿತ ಇತ್ತೀಚಿನ ಹೊಗಳಿಕೆ, ವಿವಾದ
ಲೀಸೆಸ್ಟರ್, ಇಂಗ್ಲೆಂಡ್: ಲೀಸೆಸ್ಟರ್ ಅನ್ನು ಬಾಪು ಹುಟ್ಟಿ ಬೆಳೆದ ರಾಜ್ ಕೋಟ್ ಗೆ ಹೋಲಿಸಿ, ಸ್ಥಳೀಯ ಗುಜರಾತಿ ಬಂಧುಗಳು ಮಹಾತ್ಮ ಗಾಂಧಿಯವರ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ನಲ್ಲಿ ಭಾರತೀಯ ಮೂಲದ ಸಂಸದ ಕೀತ್ ವಾಜ್ ಕೂಡ ನಿಲುವಳಿ ಮಂಡಿಸಿದ್ದಾರೆ.
ಆದರೆ, ಸ್ಥಳೀಯ ಬ್ರಿಟಿಷರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಗಾಂಧಿ ಓದಿದ್ದು ಆಕ್ಸ್ ಫರ್ಡ್ ಮತ್ತು ಲಂಡನ್ ನಲ್ಲಿ. ಲೀಸೆಸ್ಟರ್ ಗೆ ಅವರು ಭೇಟಿ ಕೊಟ್ಟೇ ಇಲ್ಲ ಹೀಗಾಗಿ ಅವರ ಪ್ರತಿಮೆ ಬದಲಾಗಿ ಸ್ಥಳೀಯ ಫುಟ್ಬಾಲ್ ಪಟು ಗ್ಯಾರಿ ಲಿನೆಕರ್ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.
******
ಗಾಂಧೀಜಿ ನಿಜವಾದ ಜಿಹಾದಿ
ಅಹಂ ವಿರುದ್ಧ ಹೋರಾಡಿ ನಿಜವಾದ ಗೆಲವು ಸಾಧಿಸಿದ ಮಹಾತ್ಮ ಗಾಂಧಿ ನಿಜವಾದ ಜಿಹಾದಿ ಎಂದು ಖ್ಯಾತ ಇಸ್ಲಾಮ್ ಆಧ್ಯಾತ್ಮಿಕ ಗುರು ಹಾಗೂ ಟರ್ಕಿಯ ಸಾಂಸ್ಕೃತಿಕ ಸಂಘದ ಮುಖ್ಯಸ್ಥೆ ಶೇಕಾ ಸೆಮಾಲ್ನುರ್ ಸರ್ಗೆಟ್ ಹೊಗಳಿದ್ದಾರೆ. ಮಹಾತ್ಮಾ ಗಾಂಧಿ ಹಜ್ ಯಾತ್ರಿಕರಂತೆಯೇ ವಸ್ತ್ರ ಧರಿಸುತ್ತಿದ್ದರು. ಹೊಲಿಗೆಯಿಲ್ಲದೆ ಏಕೈಕ ಬಟ್ಟೆಯನ್ನು ಹಜ್ ಮಾಡುವ ವೇಳೆ ಮುಸ್ಲಿಮರು ಮರು ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications