ಗ್ರಾಮೀಣ ಮಹಿಳೆಯರಿಗಾಗಿ ಐಟಿ ಪರಿಹಾರಗಳು

ಬೆಂಗಳೂರು, ಮಾ.6: ಮಹಿಳೆಯರು ಎದುರಿಸುತ್ತಿರುವ ಐಟಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕರ್ನಾಟಕ ಸರ್ಕಾರ ಮಹಿಳೆಯರಿಗಾಗಿ 'ಈ-ಮಹಿಳೆ' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಿರುವುದಾಗಿ ರಾಜ್ಯಪಾಲರ ಸಲಹೆಗಾರರಾದ ಪಿ.ಕೆ.ಎಚ್.ತಾರಕನ್ ಗುರುವಾರ ತಿಳಿಸಿದರು.

ಸರ್ಕಾರ ಉದ್ದೇಶಿಸಿರುವ 'ಈ-ಮಹಿಳೆ' ಯೋಜನೆಯನ್ನು ಆರಂಭದಲ್ಲಿ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಮಾ.8ರ ಅಂತರಾಷ್ಟ್ರೀಯ ಮಹಿಳಾ ದಿನೋತ್ಸವದಂದು ಪರಿಚಯಿಸಲಾಗುವುದು. ಹತ್ತು ಜಿಲ್ಲೆಗಳಲ್ಲಿನ ಎಲ್ಲ ಗ್ರಾಮಗಳನ್ನು ನಿಸ್ತಂತು ಅಂತರ್ಜಾಲ ತಂತ್ರಜ್ಞಾನ ಸೇವೆಯಡಿ ತರಲಾಗುವುದು ಎಂದು ರಕನ್ ಸುದ್ದಿಗಾರರಿಗೆ ತಿಳಿಸಿದರು.

ಕನಿಷ್ಠ 300 ನಿರುದ್ಯೋಗಿ ಮಹಿಳೆಯರನ್ನು ಈಗಾಗಲೇ ಗುರುತಿಸಲಾಗಿದ್ದು ಅವರಿಗೆ ಕಂಪ್ಯೂಟರ್ ಹಾಗೂ ಅಂತರ್ಜಾಲ ಬಳಕೆ ಬಗ್ಗೆ ತರಬೇತಿ ಕೊಡಲಾಗಿದೆ. ಈ ಮಹಿಳೆಯರು ತಮ್ಮ ಹಳ್ಳಿಗಳಲ್ಲಿ ಮಾಹಿತಿ ಕಿಯೋಸ್ಕ್‌ಗಳನ್ನು ನಿರ್ವಹಿಸಲಿದ್ದಾರೆ ಎಂದು ತಾರಕನ್ ತಿಳಿಸಿದರು.

'ಈ-ಮಹಿಳೆ' ಯೋಜನೆಯಿಂದ ಮಹಿಳೆಯರು ಸಮೀಪದ ಮಾರುಕಟ್ಟೆಗಳಲ್ಲಿನ ವಸ್ತುಗಳ ಬೆಲೆಗಳ ಕುರಿತು, ಮಣ್ಣಿನ ಪರೀಕ್ಷೆ, ವೈದ್ಯಕೀಯ ಸೇವೆಗಳ ಗುಣಮಟ್ಟ ಮತ್ತು ಅದಕ್ಕಾಗುವ ವೆಚ್ಚದಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ಮಾಹಿತಿ ಕಿಯೋಸ್ಕ್‌ಗಳ ಸಹಾಯದಿಂದ ರೈಲ್ವೆ ಹಾಗೂ ಬಸ್ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಬಹುದು.

'ಈ-ಮಹಿಳೆ' ಯೋಜನೆ ಮಹಿಳೆಯರನ್ನು ಕ್ರಿಯಾಶೀಲಗೊಳಿಸಿ ಅವರ ಇತರೆ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಒಂದು ವಾರ ಕಾಲ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಪ್ರದರ್ಶನಗಳು,ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಾರಕನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+