ಇಂದಿನಿಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಗಳು
ನವದೆಹಲಿ, ಮಾ.1: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಶನಿವಾರದಿಂದ(ಮಾ.1) ಪ್ರಾರಂಭವಾಗಿವೆ. 18,000 ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ.
10ನೇ ತರಗತಿ ಪರೀಕ್ಷೆಗಳು 2624 ಕೇಂದ್ರಗಳಲ್ಲಿ ಹಾಗೂ 12ನೇ ತರಗತಿ ಪರೀಕ್ಷೆಗಳು 2394 ಕೇಂದ್ರಗಳಲ್ಲಿ ನಡೆಯುತ್ತಿವೆ. ರಸಾಯನ ವಿಜ್ಞಾನ ಪತ್ರಿಕೆಯೊಂದಿಗೆ 12ನೇ ತರಗತಿ ಪ್ರಾರಂಭವಾಗಿದ್ದರೆ, ಐಚ್ಛಿಕ ವಿಷಯ ಮಾಹಿತಿ ತಂತ್ರಜ್ಞಾನ ಪತ್ರಿಕೆಯೊಂದಿಗೆ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಿವೆ.
10ನೇ ತರಗತಿ ಪರೀಕ್ಷೆಗೆ 7,65,095 ವಿದ್ಯಾರ್ಥಿಗಳು ಹಾಗೂ 12ನೇ ತರಗತಿ ಪರೀಕ್ಷೆಗೆ 5,48,815 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.8ರಷ್ಟು ಏರಿಕೆಯಾಗಿದೆ. 10ನೇ ತರಗತಿಯ 373 ಹಾಗೂ 12ನೇ ತರಗತಿಯ 214 ಅಂಧ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2500 ವಿಕಲಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಈ ವರ್ಷದಿಂದ ಸಿಬಿಎಸ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಬಹು ಆಯ್ಕೆ ಪ್ರಶ್ನೆಗಳು ಇರುವುದಿಲ್ಲ. ಕೇವಲ ಒಂದು ವಾಕ್ಯದ ಸಂಕ್ಷಿಪ್ತ ಉತ್ತರ ನಿರೀಕ್ಷಿಸುವ ಪ್ರಶ್ನೆಗಳಿಗೆ ಶೇ.10 ಅಂಕಗಳನ್ನು ನಿಗದಿಪಡಿಸಲಾಗಿದೆ. ಹಾಗೆಯೇ ಪ್ರಶ್ನಪತ್ರಿಕೆಯನ್ನು ಓದಿ ಅರ್ಥ ಮಾಡಿಕೊಳ್ಳಲು 15 ನಿಮಿಷಗಳ ಕಾಲಾವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಸಿಬಿಎಸ್‌ಸಿ ತಿಳಿಸಿದೆ.
(ಏಜೆನ್ಸೀಸ್)












Click it and Unblock the Notifications