ಸಂಬಳದಾರರಿಗೆ ಸಂತಸದ ಸುದ್ದಿ

Women always ahead, in getting tax exemption too!ನವದೆಹಲಿ, ಫೆ.29 : ಎಲ್ಲ ವರ್ಗದವರಿಗೆ ತೆರಿಗೆ ಮಿತಿಯನ್ನು ಹೆಚ್ಚಿಸಿರುವ ಪಿ.ಚಿದಂಬರಂ 2008-09 ಸಾಲಿನ ಬಜೆಟ್‌ನಲ್ಲಿ ಸಂಬಳದಾರರ ಮೊಗದಲ್ಲಿ ನಗು ಹೆಚ್ಚುವಂತೆ ಮಾಡಿದ್ದಾರೆ. ಅದರಲ್ಲೂ ಸಿಂಹಪಾಲು ಎಂದಿನಂತೆ ಮಹಿಳೆಯರ ಪಾಲಾಗಿದೆ.

ಈಗಿದ್ದ ತೆರಿಗೆ ಮಿತಿಯನ್ನು 1 ಲಕ್ಷ 10 ಸಾವಿರದಿಂದ 1 ಲಕ್ಷ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮಹಿಳಾ ನೌಕರರ ತೆರಿಗೆ ಮಿತಿಯನ್ನು 1 ಲಕ್ಷ 45 ಸಾವಿರದಿಂದ 1 ಲಕ್ಷ 80 ಸಾವಿರಕ್ಕೆ ಏರಿಸಲಾಗಿದೆ. ಹಿರಿಯ ನಾಗರಿಕರ ತೆರಿಗೆ ವಿನಾಯಿತಿಯನ್ನು ಕೂಡ ಹೆಚ್ಚಿಸಲಾಗಿದ್ದು, 1 ಲಕ್ಷ 95 ಸಾವಿರದಿಂದ 2 ಲಕ್ಷ 25 ಸಾವಿರಕ್ಕೆ ಏರಿಸಲಾಗಿದೆ.

ಈ ಏರಿಕೆಯಿಂದಾಗಿ ಒಂದೂವರೆ ಲಕ್ಷದಿಂದ 3 ಲಕ್ಷದವರೆಗಿನ ವರಮಾನದ ಮೇಲೆ ಶೇ.10ರಷ್ಟು ತೆರಿಗೆ, 3ರಿಂದ 5 ಲಕ್ಷದವರೆಗೆ ಶೇ.20 ಮತ್ತು 5 ಲಕ್ಷ ಮೇಲ್ಪಟ್ಟ ವರಮಾನಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ. 1.5 ಲಕ್ಷ ವರಮಾನವಿರುವವರಿಗೆ ತೆರಿಗೆ ಹೊರೆ ಬೀಳುವುದಿಲ್ಲ.

ಇನ್ನುಳಿದಂತೆ ಇತರ ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ಕೆಳಗಿನಂತಿದೆ:

*ಫಿಲ್ಟರ್ ರಹಿತ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಳ
*ಜೀವ ರಕ್ಷಕ ಔಷಧಿಗಳ ಮೇಲಿನ ತೆರಿಗೆ ಇಳಿಕೆ
*ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಇಲ್ಲ
*ಕಾಗದ ಮತ್ತು ಕಾಗದ ಉತ್ಪನ್ನಗಳ ಮೇಲಿನ ಸುಂಕ ಕಡಿತ
*ಹೊಸ ಆಸ್ಪತ್ರೆಗಳಿಗೆ 5 ವರ್ಷಗಳ ವರೆಗೆ ತೆರಿಗೆ ಇಲ್ಲ
*ಬ್ಯಾಂಕ್ ವಹಿವಾಟು ತೆರಿಗೆ ರದ್ದು
*ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆ ಇಲ್ಲ
*ಸಣ್ಣಕಾರುಗಳ ಮೇಲೆ ಶೇ.16ರಿಂದ ಶೇ. 14ಕ್ಕೆ ತೆರಿಗೆ ಇಳಿಕೆ
*ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಇಳಿಕೆ
*ಕಾಫಿ,ಟೀ ತಯಾರಿಕಾ ಉಪಕರಣಗಳಿಗೆ ತೆರಿಗೆ ಇಲ್ಲ
*ನೀರನ್ನು ಶುದ್ಧೀಕರಿಸುವ ವಸ್ತುಗಳ ಮೇಲಿನ ಸುಂಕ ಶೇ.8 ಕಡಿತ
*ಪಾಲಿಮರ್ ತಯಾರಿಕೆಯಲ್ಲಿ ಬಳಸುವ ನ್ಯಾಪ್ತಾ ಮೇಲಿನ ಸುಂಕ ಹಿಂತೆಗೆತ
*ಔಷಧಿ ಉತ್ಪನ್ನಗಳ ಮೇಲೆ ಶೇ.14ರಷ್ಟು ತೆರಿಗೆ ಕಡಿತ
*ರಕ್ಷಣಾ ಇಲಾಖೆಗೆ ಶೇ.10 ರಷ್ಟು ಹೆಚ್ಚು ಹಣ, 1,05,600ಕೋಟಿ ರೂ.ಗಳಿಗೆ ಏರಿಕೆ
*ಸೆಟ್ ಟಾಪ್ ಬಾಕ್ಸ್‌ಗಳ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ

(ದಟ್ಸ್‌ಕನ್ನಡ ವಾರ್ತೆ)

ಸಣ್ಣ ಮತ್ತು ಮಧ್ಯಮ ರೈತರ ಸಾಲ ಸಂಪೂರ್ಣ ಮನ್ನಾ
ಬಜೆಟ್ 08-09: ಶಿಕ್ಷಣ ಕ್ಷೇತ್ರಕ್ಕೆ ಏನು ಸಿಕ್ಕಿದೆ?
ಕೇಂದ್ರ ಬಜೆಟ್ 2008-09ನ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+