ರೈಲಲ್ಲಿ ಟಿವಿ ನೋಡಿ, ಅಂತರ್ಜಾಲದಲ್ಲಿ ಜಾಲಾಡಿ!
ನವದೆಹಲಿ, ಫೆ.26: ಭಾರತೀಯ ರೈಲುಗಳಲ್ಲಿ ಅತ್ಯಾಧುನಿಕ ಸೇವೆ ಒದಗಿಸುವ ಭರವಸೆಯನ್ನು ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಬಜೆಟ್ ಮಂಡನೆಯ ವೇಳೆ ನೀಡಿದರು.
ರೈಲ್ವೆ ಬೋಗಿಗಳಲ್ಲಿ ದೂರದರ್ಶನ, ಅಂತರ್ಜಾಲ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಎಲ್‌ಸಿಡಿ ಪ್ರದರ್ಶನ ಫಲಕಗಳನ್ನು ಏರ್ಪಡಿಸುವುದಾಗಿ ಅವರು ತಿಳಿಸಿದರು. ಎಲ್‌ಸಿಡಿ ಪ್ರದರ್ಶನ ಫಲಕಗಳು ಪ್ರಯಾಣದ ಬಗ್ಗೆ ಖಚಿತ ಮಾಹಿತಿಯನ್ನು ನೀಡುತ್ತವೆ.
ಮುಂದಿನ 7 ವರ್ಷಗಳಲ್ಲಿ ರೈಲ್ವೆಯ ಮೂಲಭೂತ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲು 75,000 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. 2009ಕ್ಕೆ ಆನ್‌ಲೈನ್ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಲಾಲೂ ಭರವಸೆ ನೀಡಿದ್ದಾರೆ.
ಒಟ್ಟಾರೆ ತಂತ್ರಜ್ಞಾನ ಬಳಕೆ ಬಗ್ಗೆ ಲಾಲೂಜೀ ನೀಡಿದ ಭರವಸೆಗಳು:
*ಮುಂಗಡಟಿಕೇಟ್ ಕಾಯ್ದಿರಿಸುವಿಕೆ ಖಚಿತಪಡಿಸುವಿಕೆಯ ಸಂದೇಶ ಮೊಬೈಲ್ ಮೂಲಕ ರವಾನೆ.
*ಮುಖ್ಯ ಕೇಂದ್ರಗಳಲ್ಲಿ ಲೋಹ ತಪಾಸಣಾ ಉಪಕರಣ ಬಳಕೆ ಹೆಚ್ಚಳ.
*ಸಿಸಿಟಿವಿ ಬಳಕೆ, ವಿದ್ಯುತ್ ರೈಲುಗಳ ಮಾರ್ಗ ಹೆಚ್ಚಳ.
*ರೈಲು ಕೇಂದ್ರಗಳಲ್ಲಿ ಟಚ್ ಸ್ಕ್ರೀನ್, ಕಲರ್ ಟಿವಿ ಅಳವಡಿಕೆ ಹಾಗೂ ಸ್ಮಾರ್ಡ್ ಕಾರ್ಡ್ ಬಳಕೆ
*6 ಸಾವಿರ ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರಗಳ ಅಳವಡಿಕೆ 2 ವರ್ಷಗಳಲ್ಲಿ ಪೂರ್ಣ
(ಏಜೆನ್ಸೀಸ್)












Click it and Unblock the Notifications