ಸ್ಪೈಸ್ ನಿಂದ 800 ರು.ಗೆ ವಾಯ್ಸ್ ಓನ್ಲಿ ಮೊಬೈಲ್
ಬೆಂಗಳೂರು, ಫೆ.18:ಭಾರತದ ಟಿಲಿಕಾಂ ಕಂಪನಿ ಸ್ಪೈಸ್ ಕಾರ್ಪೊರೆಷನ್ ಲಿಮಿಟೆಡ್ (ಎಸ್ ಸಿ ಎಲ್)ಸಂಸ್ಥೆಯು ಏಪ್ರಿಲ್ ತಿಂಗಳ ವೇಳೆಗೆ ಕೇವಲ 800 ರು.ಗಳಿಗೆ ಹೊಸ ಮಾದರಿಯ ಮೊಬೈಲ್ ಫೋನ್ ನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.ಕಡಿಮೆ ದರದ ಫೋನ್ ಆದರೂ ಇದು ಒಂದು ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ಫೋನ್ ಹಾಗು ಬೇಡಿಕೆಯೇರಿದಂತೆ ಇದರ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ ಎಂದು (ಎಸ್ ಸಿ ಎಲ್) ಕಂಪನಿಯ ಅಧ್ಯಕ್ಷ ಬಿ.ಕೆ.ಮೋದಿ ತಿಳಿಸಿದ್ದಾರೆ.
ಕಡಿಮೆ ಭಾರ ಮತ್ತು ಗಾತ್ರದ ಈ ಟಿಲಿಫೋನ್ ಗೆ ವಾಯ್ಸ್ ಒನ್ಲಿ ಮಾದರಿಯ ಟೆಲಿಫೋನ್ ಆಗಿದೆ.ಈ ಫೋನ್ ನ ಇನ್ನೊಂದು ವಿಶೇಷ ಅಂಶವೆಂದರೇ ಇದನ್ನು ಅಂಧರೂ ಸಹ ಸುಲಭವಾಗಿ ಉಪಯೋಗಿಸುವಂತೆ ಬ್ರೈಲ್ ಮಾದರಿಯಲ್ಲು ಸಹ ವಿನ್ಯಾಸಗೊಳಿಸಲಾಗಿದೆ.ಒಂದು ಅಂಕಿ ಆಂಶದ ಪ್ರಕಾರ ಭಾರತದಲ್ಲಿ ಶೇಕಡಾ 20 ರಷ್ಟು ಜನರು ಮಾತ್ರ ಮೊಬೈಲ್ ಫೋನ್ ಬಳಕೆದಾರರಿದ್ದಾರೆ.ಉಳಿದ ಜನಸಂಖ್ಯೆಗೆ ಮೊಬೈಲ್ ಫೋನ್ ಕೈಗೆಟಕುವ ಬೆಲೆಯಲ್ಲಿ ಇಲ್ಲವಾದ್ದರಿಂದ ಬಿಡುಗಡೆಗೊಳಿಸಿದ ವರ್ಷದಲ್ಲೇ ಕನಿಷ್ಠ 5 ರಿಂದ 10 ಮಿಲಿಯನ್ ಫೋನ್ ಗಳನ್ನು ಮಾರುವ ವಿಶ್ವಾಸ ಹೊಂದಿದ್ದೇವೆ ಎಂದು ಮೋದಿಯವರು ತಿಳಿಸಿದರು.
ಸ್ಪೈಸ್ ಕಂಪನಿಯು ಮುಂಬೈ ಷೇರುಮಾರುಕಟ್ಟೆಯಲ್ಲಿ 100 ಕೋಟಿ ರು. ಮೌಲ್ಯ ಹೊಂದಿರುವ ಕಂಪನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಮ್ ಕಂಪನಿ,ಸದ್ಯಕ್ಕೆ ಕರ್ನಾಟಕ ಮತ್ತು ಪಂಜಾಬ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭಾರತದ ಇತರ ರಾಜ್ಯಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ.
(ಏಜನ್ಸೀಸ್)


Click it and Unblock the Notifications
