ರಾಜ್ಯ ವಿದ್ಯುತ್ ಸಮಸ್ಯೆ: ಮಂಗಳವಾರ ಮಹತ್ವದ ಸಭೆ
ಬೆಂಗಳೂರು, ಫೆ.18: ರಾಜ್ಯ ಬಜೆಟ್ ಕುರಿತು ಚರ್ಚಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಸಮಸ್ಯೆ ತಲೆದೋರಿದೆ. ಬೇಸಿಗೆ ಕಾಲಿಟ್ಟಿದ್ದರಿಂದವಿದ್ಯುತ್ ಉತ್ಪಾದನೆ ಕೊರತೆಯೂ ಸಾಕಷ್ಟು ಕಾಡಲಿದೆ. ಈ ಸಮಸ್ಯೆಯ ಪರಿಹಾರಕ್ಕೆ ಪಂಜಾಬ್ನಿಂದ ರಾಜ್ಯಕ್ಕೆ ವಿದ್ಯುತ್ ತರಿಸಿಕೊಳ್ಳುವ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ.
ಹಾಗೆಯೇ ರೈತರ, ಕಬ್ಬು ಬೆಳೆಗಾರರ ಸಮಸ್ಯೆಗಳು, ಮೂಲೆಗುಂಪಾಗಿರುವ ಜನಪರ ಯೋಜನೆಗಳ ಕುರಿತು ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರೊಂದಿಗೆ ಸುಧಾಕರ ರಾವ್ ಚರ್ಚಿಸಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
