ಬೆಂಗಳೂರು ಓಪನ್‌ಗೆ ಸಾನಿಯಾ ಮಿರ್ಜಾ ಇಲ್ಲ

Sania Opts out of Bangalore Openಬೆಂಗಳೂರು, ಫೆ.4: ಬರುವ ಮಾರ್ಚ್ 3 ರಿಂದ 9ರವರೆಗೆ ಬೆಂಗಳೂರಿನಲ್ಲಿ ನಡೆಯುವ 6 ಲಕ್ಷ ಡಾಲರ್‌ನ ಡಬ್ಲ್ಯುಟಿಎ ದ್ವಿತೀಯ ಶ್ರೇಣಿಯ ಬೆಂಗಳೂರು ಓಪನ್‌ ಟೆನ್ನಿಸ್‌ನಿಂದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಸರಿದು ಟೆನ್ನಿಸ್ ಪ್ರೇಮಿಗಳಿಗೆ ಭಾರೀ ನಿರಾಸೆ ಉಂಟುಮಾಡಿದ್ದಾರೆ.

ಅಂತಾರಾಷ್ಟ್ರೀಯ ಆಟಗಾರರಾದ ಸೆರೆನಾ ಮತ್ತು ವೀನಸ್ ವಿಲಿಯಂಸ್ ಕರ್ನಾಟಕ ಲಾನ್ ಟೆನ್ನಿಸ್ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಶ್ರೇಣಿಯ ಬೆಂಗಳೂರು ಓಪನ್‌ನಲ್ಲಿ ಭಾಗವಹಿಸುತ್ತಿದ್ದರೂ ನಮ್ಮವಳೇ ಆದ ಸಾನಿಯಾ ಕುಂಟುನೆಪ ಹೇಳಿ ಹಿಂದೆ ಸರಿದಿರುವುದು ವ್ಯವಸ್ಥಾಪಕರಿಗೆ ನುಂಗಲಾರದ ತುತ್ತಾಗಿದೆ.

ಒಂದು ವಾರ ಕಾಲ ನಡೆಯುವ ಪಂದ್ಯಗಳಲ್ಲಿ ಸಾನಿಯಾ ಮಿರ್ಜಾ ಭಾಗವಹಿಸುತ್ತಿಲ್ಲ ಎಂದು ಪಂದ್ಯಾವಳಿಯ ನಿರ್ದೇಶಕಾರಾದ ಆರ್. ಸುಂದರ್ ರಾಜು ಸ್ಪಷ್ಟಪಡಿಸಿದ್ದಾರೆ. ನಾನು ಬೆಂಗಳೂರಿನಲ್ಲಿ ಆಡುವಾಗಲೆಲ್ಲಾ ಏನಾದರೊಂದು ಅವಾಂತರ ಎದಿರಾಗುತ್ತದೆ. ಆದ ಕಾರಣ ನನ್ನ ನಿರ್ವಾಹಕರು ಆಡದಿರಲು ಹೇಳಿದ್ದಾರೆ ಎಂದು ಸಾನಿಯಾ ತಮ್ಮ ಗೈರುಹಾಜರಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಸಾನಿಯಾ ಫೆಡ್ ಕಪ್‌ನಲ್ಲಿ ಆಡುತ್ತಿದ್ದಾರೆ.

ಆಕೆಯ ಯಶಸ್ಸಿನೊಂದಿಗೆ ಕೆಲವೊಂದು ವಿವಾದಗಳೂ ಸುತ್ತಿಕೊಳ್ಳುತ್ತಿರುವುದು ಇತ್ತೀಚೆಗೆ ಸಾಧಾರಣವಾಗಿದೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆಂದು ಹೈದಾರಾಬಾದಿನ ವಕೀಲರೊಬ್ಬರು ಇತ್ತೀಚೆಗೆ ಕೇಸು ದಾಖಲಿಸಿದ್ದರು. ಈ ಎಲ್ಲಾ ಅಡೆತಡೆಗಳ ನಡುವೆ ಸಾನಿಯಾ ಮತ್ತು ಮಹೇಶ್ ಭೂಪತಿಯ ಜೋಡಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್ ತಲುಪಿತ್ತು.

6 ಲಕ್ಷ ಡಾಲರ್‌ನ ಈ ಒಂದು ಪಂದ್ಯಾವಳಿಯಲ್ಲಿ ಕಪ್ಪು ಸುಂದರಿಯರಾದ ವಿಲಿಯಂ ಸಹೋದರಿಯರು ಹಾಗೂ ಆಸ್ಟ್ರೇಲಿಯಾದ ಸೈಬಿಲೆ ಬಾಮರ್ ಆಡುತ್ತಿರುವುದು ಟೂರ್ನಾಮೆಂಟ್ ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

(ದಟ್ಸ್‌ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+