ಅಡಿಲೇಡ್‌ನಲ್ಲಿ ಸಚಿನ್ ಮಿಂಚಿನ ಶತಕ

ಅಡಿಲೇಡ್‌ನಲ್ಲಿ ಸಚಿನ್ ಮಿಂಚಿನ ಶತಕಅಡಿಲೇಡ್, ಜ.24: ಪ್ರಸಕ್ತ ಸರಣಿಯಲ್ಲಿ ಅತ್ಯದ್ಭುತ ಲಯದಲ್ಲಿರುವ ಸಚಿನ್ ತೆಂಡೂಲ್ಕರ್ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ 39ನೇ ಶತಕವನ್ನು ದಾಖಲಿಸಿ ಭಾರತವನ್ನು ಆರಂಭಿಕ ಆಘಾತದಿಂದ ಪಾರುಮಾಡಿದ್ದಾರೆ.

ನಾಲ್ಕು ಟೆಸ್ಟ್‌ಗಳಲ್ಲಿ ಎರಡನ್ನು ಸೋತು ಒಂದು ಗೆದ್ದಿರುವ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಕಣಕ್ಕಿಳಿದಿದೆ. ಸೆಹ್ವಾಗ್ ಹೊರತುಪಡಿಸಿ ಆರಂಭಿಕ ಆಟಗಾರರೆಲ್ಲ ಲೋಬೌನ್ಸ್ ಪಿಚ್ ಮೇಲೆ ರನ್ ಗಳಿಸಿಲು ತಡಬಡಾಯಿಸಿ ಪೆವಿಲಿಯನ್‌ಗೆ ಮರಳಿದರು. ಆದರೆ, ಸರಣಿಯ ಎರಡನೇ ಶತಕ ಗಳಿಸಿದ ಸಚಿನ್ ಮತ್ತು ವಿವಿಎಸ್ ಲಕ್ಷ್ಮಣ್ ಹೊಯ್ದಾಡುತ್ತಿದ್ದ ಹಡಗನ್ನು ಉತ್ತಮ ಜೊತೆಯಾಟದಿಂದ ತಹಬದಿಗೆ ತಂದರು.

ಬಹುಶಃ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವಾಡುತ್ತಿರುವ 34ರ ಹರೆಯದ ಸಚಿನ್ ಇನ್ನೊಂದು ಬದಿಯಲ್ಲಿ ವಿಕೆಟ್ ಬೀಳುತ್ತಿದ್ದರೂ ಅಳುಕದೆ ಎಂದಿನ ವಿರಾಟ್ ರೂಪ ತೋರಿಸಿದರು ಮತ್ತು ಆಸ್ಟ್ರೇಲಿಯಾ ವಿರುದ್ಧ 9ನೇ ಶತಕ ದಾಖಲಿಸಿದರು. ಹರಿಯುವ ನೀರಿನಂತೆ ಸಾಗಿದ ಅವರ ಈ ಇನ್ನಿಂಗ್ಸ್‌ನಲ್ಲಿ ಗಳಿಸಿದ ಅಜೇಯ 124 ರನ್‌ಗಳಲ್ಲಿ 10 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳಿವೆ. ಇನ್ನೊಂದು ಬದಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಂದಿನ ಲೀಲಾಜಾಲ ಆಟವಾಡಿದ ಲಕ್ಷ್ಮಣ್ 51 ರನ್ ಗಳಿಸಿ ಬೌನ್ಸರನ್ನು ಸರಿಯಾಗಿ ಅರಿಯದೆ ನಿರ್ಗಮಿಸಿದರು.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗನ್ನು ಆಯ್ಕೆ ಮಾಡಿಕೊಂಡಿತು. ಜಾಫರ್ ಅವರನ್ನು ಕೂಡಿಸಿ ಹರ್‌ಭಜನ್‌ರನ್ನು ಕಣಕ್ಕಿಳಿಸಿರುವ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪಠಾಣ್‌ರನ್ನು ಕಳಿಸಿತು. ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಅವರು ಕೇವಲ 9 ರನ್ ಗಳಿಸಿ ಔಟಾದರು. ಬಿರುಸಿನ ಆಟವಾಡಿದ ವೀರೇಂದ್ರ ಸೆಹ್ವಾಗ್ 63, ಸಚಿನ್‌ಗೆ ಉತ್ತಮ ಬೆಂಬಲ ನೀಡಿದ ವಿವಿಎಸ್ ಲಕ್ಷ್ಮಣ್ 51, ಮತ್ತೆ ಎಡವಿದ ದ್ರಾವಿಡ್ 18, ವಿವಾದಗಳಿಂದ ತಣ್ಣಗಾಗಿರುವ ಬಂಗಾಳದ ಹುಲಿ ಸೌರವ್ ಗಂಗೂಲಿ 7 ರನ್ ಗಳಿಸಿ ಪೆವಿಲಿಯನ್‌ಗೆ ಹಿಂದಿರುಗಿದರು. ಧೋನಿ 6 ರನ್ ಗಳಿಸಿ ಆಟವಾಡುತ್ತಿದ್ದಾರೆ.

(ದಟ್ಸ್‌ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+