ಬೆಂಗಳೂರು ಮೆಟ್ರೊ ರೈಲು 2011ಕ್ಕೆ ಸಿದ್ಧ
ಮೈಸೂರು, ಜ.24: ನಾಗರೀಕರು ಕಾತರದಿಂದ ನೀರೀಕ್ಷಿಸುತ್ತಿರುವ ಬೆಂಗಳೂರು ಮೆಟ್ರೊ ರೈಲು ಯೋಜನೆ 2011ರ ಕೊನೆಗೆ ಸಿದ್ಧವಾಗಲಿದೆ ಎಂದು ಯೋಜನೆಯ ನಿರ್ದೇಶಕರಾದ ಸುಧೀರ್ ಚಂದ್ರ ತಿಳಿಸಿದ್ದಾರೆ.
6,325 ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆ 2012-2013ರ ವೇಳೆಗೆ ಸಿದ್ಧವಾಗಿ ನಾಗರೀಕರ ಪ್ರಯಾಣಕ್ಕೆ ಮುಕ್ತವಾಗಲಿದೆ. ಮೆಟ್ರೊ ರೈಲು ಯೋಜನೆಗೆ 30 ವರ್ಷಗಳಷ್ಟು ಹಿಂದೆಯೇ ಬೀಜಾಂಕುರವಾಗಿತ್ತು. ಮೆಟ್ರೊ ರೈಲು ಓಡಾಟದಿಂದ ರಸ್ತೆ ಸಂಚಾರದ ಕಿರಿಕಿರಿ, ಮಾಲಿನ್ಯದ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಕಟ್ಟಡ ನಿರ್ಮಾಪಕರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಗುರುವಾರ ಹೇಳಿದರು.
ಬೆಂಗಳೂರು ಮೆಟ್ರೊ ರೈಲು ಬಿಎಂಟಿಸಿ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ನಗರದ ಮುಖ್ಯ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. ವಿಧಾನ ಸೌಧದ ಸುತ್ತಮುತ್ತಲಿನ ಸ್ಮಾರಕಗಳನ್ನು ಸಂರಕ್ಷಿಸುವ ಸಲುವಾಗಿ ರೈಲು ಮಾರ್ಗವು ನೆಲಮಾರ್ಗದ ಮೂಲಕ ಹಾದುಹೋಗಲಿದೆ ಎಂದು ಅವರು ತಿಳಿಸಿದರು.
(ಯುಎನ್‌ಐ)
ನಮ್ಮ ಮೆಟ್ರೊ ಕಣ್ಣು ಲಾಲ್ ಬಾಗ್ ಮರಗಳ ಮೇಲೆ












Click it and Unblock the Notifications