ಹುಡುಗಿಯ ಶೀಲಹರಣ ಮಾಡಿದ ಪೊಲೀಸನಿಗೆ ಧರ್ಮದೇಟು
ಬೆಂಗಳೂರು, ಜ.04 : ಹುಡುಗಿಯನ್ನು ಬಲಾತ್ಕಾರ ಮಾಡಿದ ಆರೋಪದ ಮೇಲೆ ಹಾಸನ ಜಿಲ್ಲೆಯ ಅರಸಿಕೆರೆಯ ಪೊಲೀಸ್ ಕಾನ್ಸ್ಟೇಬಲ್ನನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಹುಡುಗಿಯರಿಬ್ಬರನ್ನು ಬೆದರಿಸಿ ಹತ್ತಿರದಲ್ಲಿದ್ದ ಮೈದಾನಕ್ಕೆ ಕರೆದೊಯ್ದ ಶಶಿಧರ್ ಎಂಬ ಕಾನ್ಸ್ಟೇಬಲ್ ಹುಡಿಯೊಬ್ಬಳನ್ನು ಬಲಾತ್ಕಾರ ಮಾಡಿದ ಎಂದು ಪೊಲೀಸರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಮತ್ತೊಬ್ಬ ಹುಡುಗಿಯ ಕಿರಿಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕುಡಿದ ಮತ್ತಿನಲ್ಲಿದ್ದ ಶಶಿಧರ್ನನ್ನು ಮನಸೋಯಿಚ್ಛೆ ಥಳಿಸಿದ್ದಾರೆ. ನಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಚಾಕರಿ ಮಾಡುತ್ತಿದ್ದ ಶಶಿಧರ್ನನ್ನು ರಕ್ಷಿಸಲು ಆ ಠಾಣೆಯ ಪೊಲೀಸರು ಹವಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಇಂದು ಧರಣಿಯನ್ನೂ ನಡೆಸಿದರು.
(ಯುಎನ್ಐ)


Click it and Unblock the Notifications
