ಟ್ವೆಂಟಿಒನ್21 ತಂಡದಲ್ಲಿ ಹರೀಶ್ ಹಂದೆ
- ನವರತ್ನ ಸುಧೀರ್
“ಬಿಸಿನೆಸ್ ಟುಡೇ" ನಿಯತಕಾಲಿಕ ಆಯ್ಕೆ ಮಾಡಿರುವ 21ನೇ ಶತಮಾನದ 21 ಯುವ ನಾಯಕರಲ್ಲಿ ನಮ್ಮ ಬೆಂಗಳೂರಿನ ಕನ್ನಡಿಗರೊಬ್ಬರು ಆಯ್ಕೆ ಯಾಗಿರುವುದು ಹೆಮ್ಮೆಯ ವಿಚಾರ. ಈ ಯುವಕ ನಲವತ್ತೊಂದು ವರ್ಷ ವಯಸ್ಸಿನ ಶ್ರೀ ಹರೀಶ್ ಹಂದೆ. ಸೆಲ್ಕೋ ಎಲೆಕ್ಟ್ರಿಕ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಈ ಯುವಕ ಪ್ರತಿಭಾವಂತ ಸೌರ ಶಕ್ತಿಯನ್ನು ಸಾರ್ವಜನಿಕವಾಗಿ ಬಳಸುವ ನಿಟ್ಟಿನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ತಂದೆ ರೂರ್ಕೆಲಾ ಕಾರ್ಖಾನೆಯಲ್ಲಿ ದುಡಿದು ನಿವೃತ್ತರಾದ ಕನ್ನಡಿಗ ಎಂಜಿನಿಯರ್ ಎಚ್. ಎಸ್. ಹಂದೆ ಮತ್ತು ತಾಯಿ ಶ್ರೀಮತಿ ಸುಶೀಲಾ ಹಂದೆ. ಈಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದಾರೆ.2005ನೇ ವರ್ಷ ಹರೀಶ್‍ರವರ ಸಂಸ್ಥೆ ಸೆಲ್ಕೋಗೆ ವಿಶ್ವದ “ ಗ್ರೀನ್ ಆಸ್ಕರ್"ಎಂದು ಪ್ರಸಿದ್ಧವಾದ ಆಶ್ಡೆನ್ ಅವಾರ್ಡ್ ದೊರಕಿತ್ತು. ನಂತರ 2007ರಲ್ಲಿ ಹರೀಶ್‍ಗೆ ವೈಯುಕ್ತಿಕ “ ಆಶ್ಡೆನ್ ಔಟ್ ಸ್ಟಾನ್ಡಿಂಗ್ ಅಛೀವರ್" ಅವಾರ್ಡ್ ದೊರಕಿತ್ತು. ಹರೀಶ್ ಹಂದೆ ಅವರಿಗೆ ಅಭಿನಂದನೆಗಳು.












Click it and Unblock the Notifications