ಒಂದೇ ದಿನದಲ್ಲಿ 2.65 ಕೋಟಿ ರೂ.ಸಂಪಾದಿಸಿದ!
ತಿರುಪತಿ, ಜ.2: ತಿರುಪತಿ ತಿಮ್ಮಪ್ಪನ ಹುಂಡಿ ವರ್ಷದ ಮೊದಲ ದಿನವೇ ಭಕ್ತರ ಕಾಣಿಕೆಗಳಿಂದ ಭರ್ತಿ ಆಯಿತು. ಮೊದಲೇ ಸಿರಿವಂತನಾದ ಬಾಲಾಜಿ ಹೊಸವರ್ಷದ ಮೊದಲದಿನ ಇನ್ನಷ್ಟು ಧನಕನಕಗಳನ್ನು ತನ್ನ ಭಕ್ತರಿಂದ ಸ್ವೀಕರಿಸಿ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾನೆ.
ವಿಐಪಿ ಪಾಸ್ಗಳನ್ನು ಮಂಗಳವಾರ(ಜ.1) ರದ್ದು ಮಾಡಲಾಗಿದ್ದರಿಂದ ತಿಮ್ಮಪ್ಪ ದರ್ಶನಕ್ಕೆ ಯಾವ ಅಡೆತಡೆಗಳು ಇರಲಿಲ್ಲ. ಹಾಗಾಗಿ ಭಕ್ತ ಸಮೂಹಕ್ಕೆ ಮುಕ್ತ ಪ್ರವೇಶ ಸಾಧ್ಯವಾಗಿತ್ತು. ಜ.1ರಂದು ಹೊಸ ವರ್ಷದ ಪ್ರಯುಕ್ತ ದಾಖಲೆ ಸಂಖ್ಯೆಯಲ್ಲಿ ಭಕ್ತರು ಶ್ರೀನಿವಾಸನ ದರ್ಶನ ಪಡೆದರು. ದಕ್ಷಿಣ ಭಾರತದಲ್ಲಿ ಬಹುತೇಕ ಕಚೇರಿಗಳಿಗೆ ಹೊಸ ವರ್ಷ ಪ್ರಯುಕ್ತ ರಜೆ ಇತ್ತಲ್ಲ.
ಹೊಸವರ್ಷದ ಪ್ರಯುಕ್ತ ದೇವಾಲಯಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತರು ಆಗಮಿಸಿದ್ದು ಕಾಣಿಕೆ ರೂಪದಲ್ಲಿ 2.65 ಕೋಟಿ ರೂ.ಗಳು ಸಂಗ್ರಹವಾಗಿ ದಾಖಲೆ ನಿರ್ಮಾಣವಾಯಿತು. ಒಂದು ಲಕ್ಷಕ್ಕೂ ಅಧಿಕ ಭಕ್ತರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಧನ್ಯರಾದರು. ಅಂತೂ ಅಂಬಾನಿಗಿಂತ, ಮಿಟ್ಟಲ್ ಗಿಂತ ಹೆಚ್ಚು ಸಂಪಾದನೆ ಮಾಡುವ ಭಾರತದ ಕುಬೇರ ನಮ್ಮ ತಿರುಪತಿ ತಿಮ್ಮಪ್ಪ ಎಂದರೆ ಏನೇನೂ ಉತ್ಪ್ರೇಕ್ಷೆ ಆಗದು.
(ಏಜನ್ಸೀಸ್)


Click it and Unblock the Notifications
